
Mangalore- ಸುಳ್ಯದಲ್ಲಿ ನಡೆಯಿತು ದುರ್ಘಟನೆ- ಜೋಕಾಲಿ ಆಡುತ್ತಿದ್ದ 10 ವರ್ಷದ ಬಾಲಕ ಹಗ್ಗ ಕುತ್ತಿಗೆಗೆ ಬಿಗಿದು ಸಾವು
Thursday, July 1, 2021
ಮಂಗಳೂರು;10 ವರ್ಷದ ಬಾಲಕನೊಬ್ಬ ಜೋಕಾಲಿಯಲ್ಲಿ ಆಡುತ್ತಿದ್ದ ವೇಳೆ ಕುತ್ತಿಗೆಗೆ ಹಗ್ಗ ಬಿಗಿದು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಚೆಂಬು ಗ್ರಾಮದಲ್ಲಿ ನಡೆದಿದೆ.
ಸುಳ್ಯದ ಚೆಂಬು ಗ್ರಾಮದ ಪನೇಡ್ಕ ತಾರಾಕುಮಾರ್ ಎಂಬವರ ಪುತ್ರ ಭರತ್ (10) ಜೋಕಾಲಿ ಆಡುತ್ತಿದ್ದ ವೇಳೆ ಸಾವನ್ನಪ್ಪಿದ ಬಾಲಕ.4 ನೇ ತರಗತಿಯಲ್ಲಿ ಕಲಿಯುತ್ತಿದ್ದ ಬಾಲಕ ನಿನ್ನೆ ಸಂಜೆ ಮನೆಯಲ್ಲಿ ಜೋಕಾಲಿ ಆಡುತ್ತಿದ್ದಾಗ ಜೋಕಾಲಿ ಹಗ್ಗ ಕುತ್ತಿಗೆಗೆ ಸಿಲುಕಿ ಈ ಘಟನೆ ಸಂಭವಿಸಿದೆ .ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.