ಮಹಿಳೆಯನ್ನು ವಿವಸ್ತ್ರಗೊಳಿಸಿ ತೋಟದ ಮನೆಯಲ್ಲಿ ಕೂಡಿ ಚಿತ್ರಹಿಂಸೆ ನೀಡುತ್ತಿದ್ದ ಭೂಪ ಅರೆಸ್ಟ್....
Thursday, July 1, 2021
ಬೆಂಗಳೂರು: ಮಹಿಳೆಯೊಬ್ಬಳನ್ನು ವಿವಾಹವಾಗುವುದಾಗಿ ನಂಬಿಸಿ 2.70 ಲಕ್ಷ ರೂ. ಪಡೆದು ತೋಟದ ಮನೆಯಲ್ಲಿ 2 ದಿನ ವಿವಸ್ತ್ರಗೊಳಿಸಿ ಕೂಡಿಹಾಕಿದ್ದ ಬಿಎಂಟಿಸಿ ಬಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಿಎಂಟಿಸಿ ಬಸ್ ಚಾಲಕ ವಿಶ್ವನಾಥ್ (42) ಎಂಬಾತನನ್ನು ಪೊಲೀಸರು ಬಂಧಿಸಿ FIR ದಾಖಲಿಸಿದ್ದಾರೆ. ಬಸವೇಶ್ವರನಗರ ನಿವಾಸಿಯಾದ 40 ವರ್ಷದ ಮಹಿಳೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಬಿಎಂಟಿಸಿ ಬಸ್‌ನಲ್ಲಿ ದಿನವೂ ಪ್ರಯಾಣಿಸುತ್ತಿದ್ದರು. 2019ರಲ್ಲಿ ಚಾಲಕ ವಿಶ್ವನಾಥ್ ಪರಿಚಯವಾಗಿ ಮಹಿಳೆಯ ಮೊಬೈಲ್ ನಂಬರ್ ಪಡೆದುಕೊಂಡಿದ್ದ. ಇವರಿಬ್ಬರ ನಡುವೆ ಸಲುಗೆ ಬೆಳೆದಿದ್ದು ಮಹಿಳೆಯನ್ನು ಆಗಾಗ ಕರೆದುಕೊಂಡು ಹೋಗುತ್ತಿದ್ದ ಎನ್ನಲಾಗಿದೆ.ವಿವಾಹವಾಗುವುದಾಗಿ ದೂರುದಾರ ಮಹಿಳೆಯನ್ನು ನಂಬಿಸಿದ್ದ ವಿಶ್ವನಾಥ್, 2.70 ಲಕ್ಷ ರೂ. ಸಹ ಪಡೆದಿದ್ದ. ಹಣ ಪಡೆದು 2 ವರ್ಷ ಕಳೆದರೂ ಹಿಂತಿರುಗಿಸದೇ ಸತಾಯಿಸುತ್ತಿದ್ದ. ಮಾ.23 ರಂದು ನೀಡಬೇಕಿರುವ ಹಣವನ್ನು ಕೊಡುತ್ತೇನೆ ಎಂದು ಹೇಳಿ, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತಿಪಟೂರಿನ ಹಾಲುಕುರ್ಕೆ ಬಳಿಯಿರುವ ತೋಟದ ಮನೆಗೆ ಕರೆದುಕೊಂಡು ಹೋಗಿದ್ದ. ತೋಟದ ಮನೆಯಲ್ಲಿ ಆಕೆಯನ್ನು ಕೂಡಿಹಾಕಿ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾನೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಆರೋಪಿ ವಿಶ್ವನಾಥ್‌ನನ್ನು ಬಂಧಿಸಿ ವಿಚರಣೆಗೆ ಒಳಪಡಿಸಿದ್ದಾರೆ.