ಮದುವೆಯಾಗೋಲ್ಲವೆಂದು ಮರ್ಮಾಂಗಕ್ಕೆ ಕತ್ತರಿ ಹಾಕಿದ ಯುವಕ!
Thursday, July 1, 2021
ಸೇಲಂ(ತಮಿಳುನಾಡು): ವಿರೋಧಿಸಿದರೂ, ಪಟ್ಟು ಬಿಡದೆ ಪೋಷಕರು ಮದುವೆಗೆ ತಯಾರಿ ನಡೆಸುತ್ತಿರುವುದನ್ನು ಮನಗಂಡು ಯುವಕನೋರ್ವ ತನ್ನ ಜನನಾಂಗ ಹಾಗೂ ಕತ್ತು ಕತ್ತರಿಸಿಕೊಂಡು ಅತ್ಮಹತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡು ರಾಜ್ಯದ ಸೇಲಂ ಜಿಲ್ಲೆಯ ತಮ್ಮಂಪಟ್ಟಿ ನಡೆದಿದೆ.
ವೃತ್ತಿಯಲ್ಲಿ ಬಡಗಿಯಾಗಿರುವ ವಿಜಯರಾಘವನ್ ಆತ್ಮಹತ್ಯೆಗೆ ಯತ್ನಿಸಿದಾತ.
ವಿಜಯರಾಘವನ್ ಗೆ ಪೋಷಕರು ಮದುವೆ ಮಾಡಲು ನಿರ್ಧರಿಸಿದ್ದರು. ಆದರೆ, ಆತ ತಾನು ಮದುವೆಯಾಗೋಲ್ಲ ತಯಾರಿ ನಡೆಸಬೇಡಿ ಎಂದು ಹೇಳಿದ್ದನು. ಇದೇ ವಿಚಾರಕ್ಕೆ ಪೋಷಕರು ಹಾಗೂ ವಿಜಯ್ ರಾಘವನ್ ನಡುವೆ ವಾದ ನಡೆದಿದೆ. ಇದರಿಂದ ಆಕ್ರೋಶಗೊಂಡ ಆತ ಉಳಿಯಿಂದ ಶಿಶ್ನ ಹಾಗೂ ಕುತ್ತಿಗೆ ಕತ್ತರಿಸಿಕೊಂಡು, ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಘಟನೆ ಬಳಿಕ ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅದೇ ದಿನ ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆಂದು ತಿಳಿದು ಬಂದಿದೆ. ಘಟನೆ ಬಗ್ಗೆ ಪೊಲೀಸರ ಬಳಿ ಕೇಳಿದಾಗ ನಮ್ಮ ಬಳಿ ಅಂತಹ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.