ಜೋಕಾಲಿ ತಂದಿಟ್ಟ ಆಪತ್ತು- ಬಲಿಯಾಯಿತು ಇಬ್ಬರ ಪ್ರಾಣ..
Thursday, July 1, 2021
ಮಡಿಕೇರಿ: ಅಮ್ಮನ ಸೀರೆಯಲ್ಲಿ ಜೋಕಾಲಿ ಆಡುತ್ತಿದ್ದ ಇಬ್ಬರು ಮಕ್ಕಳು ಅದೇ ಜೋಕಾಲಿಯಿಂದ ಜೀವ ಕಳೆದುಕೊಂಡ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಗಣಗೂರು ಉಂಜಿಗನ ಹಳ್ಳಿಯ ರಾಜು ಹಾಗೂ ಜಯಂತಿ ದಂಪತಿಗಳ ಮಣಿಕ್ ಶಾ(14) ಹಾಗೂ ಪೂರ್ಣೆಶ್ (12) ದಾರುಣವಾಗಿ ಸಾವನ್ನಪ್ಪಿದ ಮಕ್ಕಳು. ಮನೆಯಲ್ಲಿ ಇಬ್ಬರೇ ಅಕ್ಕಾ, ತಮ್ಮ ಇಬ್ಬರೂ ಜೋಕಾಲಿಯಲ್ಲಿ ಆಟವಾಡುತ್ತಿದ್ದರು. ಜೋಕಾಲಿ ಉರುಳಾಗಿ ಸುತ್ತಿಕೊಂಡ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕೆಲಸಕ್ಕೆ ತೆರಳಿದ್ದ ತಾತ ರಾಮಣ್ಣ ಮನೆಗೆ ಬಂದು ನೋಡಿದಾಗ ಎರಡು ಮಕ್ಕಳು ನೇಣು ಬಿಗಿದ ಸ್ಥಿತಿಯಲ್ಲಿದ್ದು, ತಕ್ಷಣವೇ ಸೀರೆಯನ್ನು ಕತ್ತರಿಸಿ ಮಕ್ಕಳನ್ನು ಕೇಳಗಿಳಿಸಿದ್ದಾರೆ ಆದರೆ ಆ ವೇಳೆಗೆ ಇಬ್ಬರೂ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮಕ್ಕಳು ಜೋಕಾಲಿ ಆಟಲು ಹೋಗಿ ಪ್ರಾಣ ಕಳೆದುಕೊಂಡಿದ್ದು,ಕುಟುಂಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.