ಬೇರೆ ದೇಶದಿಂದ ಬಂದು Tik Tok ಮಾಡಿದ ವ್ಯಕ್ತಿ ಜೈಲಿಗೆ...
Thursday, July 1, 2021
ಕುವೈತ್: ಈಜಿಪ್ಟ್ನಿಂದ ಕುವೈತ್ಗೆ ಬಂದು ಟಿಕ್ಟಾಕ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ವ್ಯಕ್ತಿಯನ್ನು ಕುವೈತ್ ಪೊಲೀಸರು ಬಂದಿಸಿದ್ದಾರೆ.
ಈತ ಕುವೈತ್ನ ಹವಾಮಾನದ ಬಗ್ಗೆ ಮಾತನಾಡಿದ್ದ. ಅಲ್ಲಿ ತಾಪಮಾನ ಅತಿ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಪೂರ್ತಿ ಪ್ರದೇಶ ಧೂಳಿನಿಂದ ಆವರಿಸಿಕೊಂಡಿದೆ. ಅದರ ಬಗ್ಗೆಯೇ ವಿಡಿಯೋ ಮಾಡಿದ್ದ ಆತ ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾನೆ. ಮುಂದಿರುವವರು ಕಾಣದಂತ ಕೆಟ್ಟ ಹವಾಮಾನ ಇಲ್ಲಿದೆ ಎಂದಿದ್ದ ಆತ ಅಲ್ಲಿನ ಆಡಳಿತವನ್ನೂ ಬೈದಿದ್ದ. ಆತನ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆ ಹಿನ್ನೆಲೆಯಲ್ಲಿ ಕುವೈತ್ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಆತನ ಪರವಾಗಿ ಅಭಿಯಾನಗಳು ಆರಂಭವಾದ ಹಿನ್ನೆಲೆಯಲ್ಲಿ ಆತನನ್ನು ಬಿಡುಗಡೆ ಮಾಡಲಾಗಿದೆ. ನಂತರ ಆತನನ್ನು ಬಿಡುಗಡೆ ಮಾಡಿ ಈಜಿಪ್ಟ್ಗೆ ಕಳುಹಿಸಿಕೊಟ್ಟಿರುವುದಾಗಿ ಹೇಳಲಾಗಿದೆ.