ಎರಡನೇ ಹೆಂಡತಿ ಜೊತೆ ಸೇರಿಕೊಂಡು ಮೊದಲನೇ ಹೆಂಡತಿಯ ಮರ್ಡರ್ ಸ್ಕೆಚ್... ಉರುಳಿದ್ದು ಯಾರ ಪ್ರಾಣ ಗೊತ್ತಾ..??
Thursday, July 1, 2021
ಜೈಪುರ: ಮೊದಲನೇ ಹೆಂಡತಿಗೆ ವಿಚ್ಛೇದನ ನೀಡದೆ ಇನ್ನೊಬ್ಬಳನ್ನು ಮದುವೆಯಾಗಿ ಆಕೆಯನ್ನು ಮನೆಗೆ ಕರೆದುಕೊಂಡು ಬಂದು ಮೊದಲನೇ ಹೆಂಡತಿಯನ್ನು ಕೊಲೆ ಮಾಡಿರುವ ಘಟನೆ ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯಲ್ಲಿ ನಡೆದಿದೆ.
ಕಾಂಜಿ ಎಂಬಾತ ಲಲಿತಾ ಎಂಬಾಕೆಯನ್ನು ಮದುವೆಯಾಗಿದ್ದ ಅವರಿಬ್ಬರಿಗೆ ಒಬ್ಬಳು ಮಗಳು ಕೂಡ ಇದ್ದಾಳೆ. ಆದರೆ ಸ್ವಲ್ಪ ತಿಂಗಳ ಹಿಂದೆ ಮನೀಶ ಎಂಬ ಹೆಸರಿನ ಮಹಿಳೆಯೊಂದಿಗೆ ಎರಡನೇ ಮದುವೆಯಾಗಿದ್ದ. ಈ ಸುದ್ದಿ ತಿಳಿದ ನಂತರ ಮೊದಲನೇ ಹೆಂಡತಿ ಮನೆ ಬಿಟ್ಟು ಹೋಗಿದ್ದಳು. ಮತ್ತೆ ಲಲಿತಾ ಮನೆಗೆ ಬಂದಾಗ ಕಾಂಜಿ ಅವಳ ಜೊತೆ ಜಗಳವಾಡಿದ್ದಾನೆ. ಅವರ ಜಗಳ ತಾರಕಕ್ಕೇರಿ ಎರಡನೇ ಹೆಂಡತಿ ಜೊತೆ ಸೇರಿಕೊಂಡು ಲಲಿತಾಳನ್ನು ಕೊಲೆ ಮಾಡಿ ನಂತರ ಇಬ್ಬರೂ ಸೇರಿಕೊಂಡು ತಮ್ಮ ಜಮೀನಿನಲ್ಲಿ ಹೂತು ಹಾಕಿದ್ದಾರೆ. ಲಲಿತ ಮಗಳು ಅಮ್ಮ ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದು ತನಿಖೆ ನಡೆಸಿದ ಪೊಲೀಸರಿಗೆ ಕಾಂಜಿ ಮತ್ತು ಮನೀಶ ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂಬ ವಿಷಯ ತಿಳಿದುಬಂದಿದೆ.
ಆ ವೇಳೆಗಾಗಲೇ ಊರು ಬಿಟ್ಟಿದ್ದ ಕಾಂಜಿ ಮತ್ತು ಮನಿಷಾ ಇಂಡೋರ್ನಲ್ಲಿ ದಿನಗೂಲಿ ಕೆಲಸಗಾರರಾಗಿ ಕೆಲಸ ಮಾಡುತ್ತಿದ್ದರು. ಆರೋಪಿಗಳಿಗಾಗಿ ಬಲೆ ಬೀಸಿದ ಪೊಲೀಸರು ಇದೀಗ ಅವರನ್ನು ಬಂಧಿಸಿದ್ದಾರೆ.