
Mangalore-ನಾಳೆಯಿಂದ ( ಜುಲೈ 1 ) ಮಂಗಳೂರಿನಲ್ಲಿ ಖಾಸಗಿ ಬಸ್ ಆರಂಭ- 20 ಶೇಕಡ ಪ್ರಯಾಣ ದರ ಹೆಚ್ಚಳ
Wednesday, June 30, 2021
ಮಂಗಳೂರು: ಮಂಗಳೂರಿನಲ್ಲಿ ಕೊರೊನಾ ಲಾಕ್ಡೌನ್ ಬಳಿಕ ನಾಳೆ (ಜುಲೈ 1) ಯಿಂದ ಖಾಸಗಿ ಬಸ್ ಸಂಚಾರಆರಂಭವಾಗಲಿದೆ.
ಇತ್ತೀಚಿಗೆ ಲಾಕ್ಡೌನ್ ಸಡಿಲಿಕೆ ಮಾಡಿದ ಜಿಲ್ಲಾಡಳಿತ ಬಸ್ ಸಂಚಾರಕ್ಕೆ ಅನುಮತಿ ನೀಡಿದ್ದರೂ ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ಆರಂಭವಾಗಿರಲಿಲ್ಲ. ಸ್ಥಗಿತಗೊಂಡಿದ್ದ ಬಸ್ ಸಂಚಾರವನ್ನು ಏಕಾಏಕಿ ಆರಂಭಿಸಲು ನಿರ್ವಹಣೆ ಮತ್ತು ತಿಂಗಳ ಮಧ್ಯೆ ಬಸ್ ಓಡಾಟ ಮಾಡಿದರೆ ತೆರಿಗೆ ಪಾವತಿಸಬೇಕಾದ ಹಿನ್ನೆಲೆಯಲ್ಲಿ ಆರಂಭಿಸಲು ನಿರಾಕರಿಸಿದ್ದರು.
ಜುಲೈ 1 ರಿಂದ ಬಸ್ ಸಂಚಾರ ಆರಂಭಿಸುವುದಾಗಿ ಬಸ್ ಮಾಲಕರ ಸಂಘ ನಿರ್ಧರಿಸಿತ್ತು. ಬಸ್ನಲ್ಲಿ 50% ಪ್ರಯಾಣಿಕರನ್ನು ಮಾತ್ರ ಕರೆದುಕೊಂಡು ಹೋಗಬೇಕಿರುವುದರಿಂದ ಬಸ್ ಪ್ರಯಾಣ ದರ ಹೆಚ್ಚಿಸಲು ಬಸ್ ಮಾಲೀಕರು ಆಗ್ರಹಿಸಿದ್ದರು. ಇತ್ತೀಚೆಗೆ ಸಾರಿಗೆ ಪ್ರಾಧಿಕಾರದ ಜೊತೆ ಬಸ್ ಮಾಲೀಕರು ನಡೆಸಿದ ಸಭೆಯಲ್ಲಿ ಈಗಿರುವ ಬಸ್ ಪ್ರಯಾಣ ದರವನ್ನು ಶೇಕಡಾ 20 ಹೆಚ್ಚಿಸಲು ಅನುಮತಿ ನೀಡಲಾಗಿದೆ.ಕೊರೊನಾ ಲಾಕ್ಡೌನ್ ನಿಯಮಾವಳಿ ಇರುವವರಗೆ ಈ ಹೆಚ್ಚಳವಾದ ದರ ಇರಲಿದೆ. ನೂತನ ಬಸ್ ದರ ಈ ಕೆಳಗಿನಂತಿದೆ.