
UDUPI: ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋದ ನಾಡದೋಣಿ
Saturday, July 2, 2022
ಉಡುಪಿಯಲ್ಲಿ ಕಡಲ ಅಲೆಗಳ ಅಬ್ಬರಕ್ಕೆ ಲಂಗರು ಹಾಕಿದ ನಾಡದೋಣಿಯೊಂದು ಕೊಚ್ಚಿಕೊಂಡು ಹೋಗಿ ಲಕ್ಷಾಂತರ ರೂ ನಷ್ಟ ಉಂಟಾದ ಘಟನೆ ನಡೆದಿದೆ. ಸದ್ಯ ಜೋರಾಗಿ ಮಳೆ ಇರುವ ಕಾರಣದಿಂದ ನಾಡ ದೋಣಿ ಮೀನುಗಾರರು ಸಮುದ್ರಕ್ಕೆ ಇಳಿಯುತ್ತಿಲ್ಲ ಹೀಗಾಗಿ ಮಲ್ಪೆ ಕಡಲ ತೀರದಲ್ಲಿ ಲಂಗರು ಹಾಕಿದ್ದರು. ಸಮುದ್ರ ಅಲೆಗಳು ಜೋರಾಗಿ ಇದ್ದ ಕಾರಣದಿಂದ ಲಂಗರು ಹಾಕಿದ ನಾಡದೋಣೆ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದ್ದು, ಸುಮಾರು 10 ಕಿಲೋಮೀಟರ್ ದೂರ ಕಾಪು ತಾಲೂಕಿನ ಕೈಪುಂಜಾಲು ಎಂಬಲ್ಲಿ ಪತ್ತೆಯಾಗಿದೆ. ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಎರಡು ಭಾಗವಾಗಿದ್ದು, ಕ್ರೇನ್ ಸಹಾಯದಿಂದ ದೋಣಿಯನ್ನು ಮೇಲಕ್ಕೆ ಎತ್ತಲಾಗಿದೆ. ದೋಣಿಯಲ್ಲಿ ಇದ್ದ ಬಲೆಗಳಿಗೂ ಹಾನಿಯಾಗಿದೆ. ಉಡುಪಿಯ ಮಲ್ಪೆಯ ಒಬ್ಬರು ಹಾಗೂ ಕೇರಳದ ವರ್ಗಿಸ್ ಎಂಬುವವರಿಗೆ ಸೇರಿದ ನಾಡದೋಣಿ ಇದಾಗಿದ್ದು ಸುಮಾರು 15 ಲಕ್ಷ ನಷ್ಟ ಉಂಟಾಗಿದೆ.