ಲೈಂಗಿಕ ದೌರ್ಜನ್ಯ ಪ್ರಕರಣ: ಪ್ರಶ್ನೆ ಕೇಳಿದ ಮಹಿಳಾ journalistಗೆ ಕೇರಳದ ಮಾಜಿ ಶಾಸಕ ಹೇಳಿದ್ದೇನು ಗೊತ್ತಾ?
Saturday, July 2, 2022
ತಿರುವನಂತಪುರಂ: ಪ್ರಚೋದನಾತ್ಮಕ ಭಾಷಣ ಮಾಡಿ ವಿವಾದಕ್ಕೀಡಾಗಿದ್ದ ಕೇರಳದ ಮಾಜಿ ಶಾಸಕ ಪಿಸಿ ಜಾರ್ಜ್ ಇದೀಗ ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ.
ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಅವರ ವಿರುದ್ಧ ಮತ್ತೆ ಎರಡು ದೂರು ತಿರುವನಂತಪುರಂ ನ ಮ್ಯೂಸಿಯಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಈ ಕುರಿತಂತೆ ಇಂದು ಮಾಧ್ಯಮದ ಕಾರ್ಯಕರ್ತರು ಪಿಸಿ ಜಾರ್ಜ್ ಅವರ ಬಳಿ ಪ್ರಶ್ನೆ ಕೇಳಿದ್ದು, ಈ ನಡುವೆ ಮಹಿಳಾ ಪತ್ರಕರ್ತೆ ದೂರುದಾರೆಯ ಹೆಸರು ಉಲ್ಲೇಖಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಕೇಳಿದ್ದರು. ಈ ವೇಳೆ ಕೆಂಡಾಮಂಡಲರಾದ ಪಿಸಿ ಜಾರ್ಜ್ 'ಹಾಗಾದರೆ ನಿಮ್ಮ ಹೆಸರನ್ನು ಉಲ್ಲೇಖಿಸುತ್ತೇನೆ' ಎಂದು ಅಸಭ್ಯವಾಗಿ ಉತ್ತರಿಸಿದ್ದರು.
ಇದರಿಂದ ಪತ್ರಕರ್ತರೆಲ್ಲಾ ಪಿಸಿ ಜಾರ್ಜ್ ವಿರುದ್ಧ ಹರಿಹಾಯ್ದಿದ್ದು, ಇದು ಸಭ್ಯವರ್ತನೆ ಅಲ್ಲ ಎಂದು ನೈತಿಕ ಪಾಠ ಬೋಧಿಸಿದ್ದಾರೆ.
ಕೆಲಕಾಲ ಪತ್ರಕರ್ತರು ಮತ್ತು ಪಿಸಿ ಜಾರ್ಜ್ ನಡುವೆ ವಾಗ್ವಾದ ನಡೆದಿದ್ದು ಬಳಿಕ ಪೊಲೀಸರು ಮಾಜಿ ಶಾಸಕರನ್ನು ಕರೆದುಕೊಂಡು ಹೋಗಿದ್ದಾರೆ.