ಈ ಶಿಕ್ಷಕ ಕಾಮದಾಟವಾಡಿದ್ದು ಬರೋಬ್ಬರಿ 40 ಮಹಿಳೆಯರ ಜೊತೆ - Mobile ರಿಪೇರಿಗೆ ಕೊಟ್ಟಾಗ ಹೊರಬಂತು Video
Saturday, July 2, 2022
ಕೊಪ್ಪಳ: ಇಬ್ಬರು ಮಹಿಳೆಯರ ಜೊತೆ ಸಂಬಂಧ ಬೆಳೆಸಿ ಅದನ್ನು ವೀಡಿಯೋ ಚಿತ್ರೀಕರಿಸಿ ಬಳಿಕ ಆ ಮಹಿಳೆಯರ ಮೂಲಕವೇ ಇನ್ನಷ್ಟು ಮಹಿಳೆಯರನ್ನು ಖೆಡ್ಡಾಕ್ಕೆ ಬೀಳಿಸಿದ ಶಿಕ್ಷಕನೋರ್ವ ಘಟನೆ ಬೆಳಕಿಗೆ ಬಂದ ಬಳಿಕ ಅಮಾನತ್ತಾದ ಘಟನೆ ಕೊಪ್ಪಳ ಜಿಲ್ಲೆ ಕಾರಟಗಿ ಪಟ್ಟಣದಲ್ಲಿ ನಡೆದಿದೆ.
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ಸಿಂಗಾಪೂರ ಗ್ರಾಮದ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕ ಅಜರುದ್ಧೀನ್ ಆರೋಪಿ. ಈತ ಹಲವು ಸ್ತ್ರೀಯರನ್ನು ಲೈಂಗಿಕವಾಗಿ ಬಳಸಿಕೊಂಡಿರುವ ವಿಡಿಯೋ ವೈರಲ್ ಆಗಿದ್ದು, ಸದ್ಯ ಕೆಲಸದಿಂದ ಅಮಾನತು ಮಾಡಲಾಗಿದೆ.
ಮೊದಲು ಇಬ್ಬರು ಮಹಿಳೆಯರ ಜೊಲೆ ಸಲುಗೆ ಬೆಳೆಸಿದ್ದ ಈತ ಬಳಿಕ ಅವರ ಮೂಲಕವೇ ಹಲವು ಮಹಿಳೆಯರ ಸಂಪರ್ಕ ಬೆಳಡಸಿದ್ದ. ಒಂದು ಮಾಹಿತಿಯ ಪ್ರಕಾರ ಈತ ಸುಮಾರು 40ರಷ್ಟು ಮಹಿಳೆಯರ ಜೊತೆ ಸಂಬಂಧ ಇಟ್ಟುಕೊಂಡಿದ್ದನಂತೆ. ಮಹಿಳೆಯರ ಜೊತೆಗಿರುವ ವೇಳೆ ವೀಡಿಯೋ ಮಾಡುವ ಚಟ ಈತನಿಗಿತ್ತು.
ಇತ್ತೀಚೆಗೆ ಮೊಬೈಲ್‌ನಲ್ಲಿದ್ದ ಮೆಮೊರಿ ಕಾರ್ಡ್ ಯಾರದ್ದೋ ಕೈಗೆ ಸಿಕ್ಕಿದ್ದು, ಕಾಮದಾಟದ ವೀಡಿಯೋ ವೈರಲ್ ಆಗಿದೆ. ಶಿಕ್ಷಕನ ಸೆಕ್ಸ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಆರೋಪಿ ಅಜುರುದ್ಧಿನ್ನನ್ನು ಕೆಲಸದಿಂದ ಅಮಾನತು ಮಾಡಿ ಬಿಇಒ ಆದೇಶ ಹೊರಡಿಸಿದ್ದಾರೆ.