ಅಪ್ರಾಪ್ತೆ ಜೊತೆ ಸಲುಗೆ: Pregnant ಆದಾಗ ಮಾತ್ರೆ ನುಂಗಿಸಿದ - ಬಳಿಕ ನಡೆಯಿತು ಅನಾಹುತ
Saturday, July 2, 2022
ಚೆನ್ನೈ: ಅಪ್ರಾಪ್ತ ಬಾಲಕಿಯನ್ನು ಗರ್ಭಿಣಿಯಾಗಿಸಿ ಬಳಿಕ ಆಕೆಗೆ ಗರ್ಭಪಾತ ಮಾತ್ರೆ ನೀಡಿ ಆಕೆಯ ಸಾವಿಗೆ ಕಾರಣವಾಗಿರುವ ಘಟನೆ ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಚೆಂಗಂನಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಮುರುಗನ್ ಎಂಬಾತ ಶಾಲೆಗೆ ಕರೆದೊಯ್ಯುತ್ತಿದ್ದ. ಈ ವೇಳೆ ಇಬ್ಬರ ನಡುವೆ ಸಂಬಂಧ ಬೆಳೆದು ಬಾಲಕಿ ಗರ್ಭ ಧರಿಸಿದ್ದಳು. ಈ ವಿಚಾರವನ್ನು ಮುರುಗನ್‍ಗೆ ತಿಳಿಸಿದ್ದಾಳೆ. ನಂತರ ಮುರುಗನ್ ಸ್ನೇಹಿತ ಪ್ರಭು(27) ಗರ್ಭಪಾತ ಮಾತ್ರೆ ಸೇವಿಸುವಂತೆ ಸಲಹೆ ನೀಡಿದ್ದನು. ಹೀಗಾಗಿ ಮುರುಗನ್ ಗರ್ಭಪಾತ ಮಾತ್ರೆ ಖರೀದಿಸಿ, ಬಾಲಕಿಗೆ ನುಂಗಿಸಿದ್ದಾನೆ.
ಆದರೆ ಬಾಲಕಿ ಮಾತ್ರ ಸೇವಿಸಿದ ಕೆಲ ಸಮಯದ ಬಳಿಕ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾಳೆ. ಕೂಡಲೇ ಮುರುಗನ್ ಬಾಲಕಿಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದರೆ ಅಷ್ಟರಲ್ಲೇ ಬಾಲಕಿ ಮೃತಪಟ್ಟಿದ್ದಳು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಿರುವನಮಲೈ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಬಾಲಕಿಯ ತಂದೆ ನೀಡಿದ ದೂರಿನ ಮೇಲೆ ಮುರುಗನ್ ಹಾಗೂ ಆತನ ಸ್ನೇಹಿತ ಪ್ರಭು ಅನ್ನು ಬಂಧಿಸಿದ್ದಾರೆ. ಅಲ್ಲದೇ ಮುರುಗನ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.