UDUPI : ಸ್ವರ್ಣಾ ನದಿಗೆ ಬಿದ್ದು ಯುವಕ ಸಾವು
Saturday, October 8, 2022
ಉಡುಪಿ ನಗರ ಸಮೀಪದ ಕಲ್ಯಾಣಪುರ ಸಂತೆಕಟ್ಟೆಯ
ಕಡುವಿನಬಾಗಿಲು ಎಂಬಲ್ಲಿ ಮೀನುಗಾರರೊಬ್ವರು ದೋಣಿಯಿಂದ ನದಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಶಿವರಾಜ್ ( 32) ಮೃತ ಮೀನುಗಾರ.
ಶಿವರಾಜ್ ಎಂದಿನಂತೆ ಸ್ವರ್ಣಾ ನದಿಗೆ ಮೀನುಗಾರಿಕೆ ನಡೆಸಲು ತೆರಳಿದ್ದರು. ಇಂದು ಮೀನುಗಾರಿಕೆ ನಡೆಸುವ ವೇಳೆ ಅಕಸ್ಮಾತ್ತಾಗಿ ಆಯತಪ್ಪಿ ನೀರಿಗೆ ಬಿದ್ದಿದ್ದಾರೆ. ತಕ್ಷಣ ಅಗ್ನಿಶಾಮಕ ದಳ ಮತ್ತು ಮುಳುಗು ತಜ್ಞ ಈಶ್ವರ್ ಮಲ್ಪೆ ನೀರಿಗೆ ಬಿದ್ದ ಮೀನುಗಾರನಿಗಾಗಿ ವ್ಯಾಪಕ ಶೋಧ ಕಾರ್ಯ ನಡೆಸಿದರೂ ಸಿಕ್ಕಿರಲಿಲ್ಲ. ಕೊನೆಗೆ ಸ್ವರ್ಣಾ ನದಿಯಲ್ಲಿ ಶಿವರಾಜ್ ಮೃತದೇಹ ಸಿಕ್ಕಿದ್ದು ಅದನ್ನು ಮೇಲಕ್ಕೆತ್ತಲಾಗಿದೆ. ಈ ಬಗ್ಗೆ ಮಲ್ಪೆ .ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.