SHOCKING NEWS : ಶಾಸಕ ಹರೀಶ್ ಪೂಂಜಾ ಕಾರು ಅಡ್ಡಗಟ್ಟಿ ತಲವಾರು ಝಳಪಿಸಿದ ದುಷ್ಕರ್ಮಿಗಳು
Friday, October 14, 2022
ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಚಲಿಸುತ್ತಿದ್ದ ಕಾರನ್ನು ಫರಂಗಿಪೇಟೆಯಲ್ಲಿ ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡ ತಲಾವಾರು ಝಳಪಿಸಿದ ಘಟನೆ ನಡೆದಿದೆ.
ಈ ಬಗ್ಗೆ ಶಾಸಕ ಹರೀಶ್ ಪೂಂಜಾ ಅವರ ಕಾರಿನ ಚಾಲಕ ನವೀನ ಅವರು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರಿನ ಸಾರಂಶ
ನವೀನ್ ಅವರು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ರವರ ಕಾರು ಚಾಲಕರಾಗಿದ್ದಾರೆ. ಶಾಸಕರಾದ ಹರೀಶ್ ಪೂಂಜಾರವರು ದಿನಾಂಕ 12-10-2022 ರಂದು ಬೆಂಗಳೂರಿಗೆ ಹೋಗಿದ್ದು ದಿನಾಂಕ 13-10-2022 ರಂದು ಸಂಜೆ 6.20 ರ ವಿಮಾನದಲ್ಲಿ ಮಂಗಳೂರಿಗೆ ಬರುವ ಬಗ್ಗೆ ನವೀನ್ ರಿಗೆ ಮಾಹಿತಿ ನೀಡಿದ್ದರು. ಅದರಂತೆ ನವೀನ್ ಅವರು ಶಾಸಕರ ಕಾರು ಕೆಎ-19-ಎಂ.ಪಿ- 0369 ನೇಯದನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಸಂಜೆ 5.40 ಗಂಟೆಗೆ ಹೋಗಿದ್ದು ಶಾಸಕರು ಸಂಜೆ 7.07 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದು ಅಲ್ಲಿಂದ ಶಾಸಕರನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ಮಂಗಳೂರು ಸರ್ಕೂಟ್ ಹೌಸ್ ಹೋಗಿದ್ದರು. ಅಲ್ಲಿ ಮೀಟಿಂಗ್ ನಲ್ಲಿ ಭಾಗವಹಿಸಿ ಬಳಿಕ ರಾತ್ರಿ 10.45 ಗಂಟೆಗೆ ಮಂಗಳೂರು ಸರ್ಕೂಟ್ ಹೌಸ್ ನಿಂದ ನವೀನ್ ಅವರು ಶಾಸಕರ ಕಾರಿನಲ್ಲಿ ಒಬ್ಬನೇ ಚಲಾಯಿಸಿಕೊಂಡು ಬಂದಿದ್ದರು. ಶಾಸಕರು ಅವರ ಸಂಬಂದಿಕರಾದ ಪ್ರಶಾಂತ್ ಮತ್ತು ಕುಶಿತ್ ರವರ ಕೆಎ-19-ಎಂ.ಇ -5560 ನೇ ಕಾರಿನಲ್ಲಿ ಮಂಗಳೂರು ಸರ್ಕೂಟ್ ಹೌಸ್ ನಿಂದ ಹೊರಟಿದ್ದರು. ಎದುರಿನಿಂದ ಶಾಸಕರು ಕಾರು ಹೋಗುತ್ತಿದ್ದು ನಂತೂರು,ಪಡೀಲ್ ಮಾರ್ಗವಾಗಿ ಬರುತ್ತಾ ನಾಗುರಿ ರೈಲ್ವೇ ಓವರ್ ಬ್ರಿಡ್ಜ್ ತಲಭಾಗದಲ್ಲಿ ಒಂದು ಸ್ಕಾರ್ಪಿಯೋ ಕಾರು ಇವರು ಚಲಾಯಿಸಿಕೊಂಡು ಬರುತ್ತಿದ್ದ ಕಾರನ್ನು ಹಿಂಬಾಲಿಸಿಕೊಂಡು ಬರುತ್ತಿದ್ದು ಈ ಬಗ್ಗೆ ಶಾಸಕರಿಗೆ ಮೊಬೈಲ್ ಮೂಲಕ ನವೀನ್ ತಿಳಿಸಿದ್ದರು, ಮುಂದಿನ ಕಾರಿನಲ್ಲಿದ್ದ ಶಾಸಕರು ನವೀನ್ ರಲ್ಲಿ ಕಾರನ್ನು ಹಿಂಭಾಲಿಸಿಕೊಂಡು ಬರುವಂತೆ ತಿಳಿಸಿದ್ದಾರೆ. ಅದರಂತೆ ಶಾಸಕರಿದ್ದ ಕಾರನ್ನು ಹಿಂಬಾಲಿಸಿಕೊಂಡು ಹೋಗುತ್ತಾ ಕಾರಿನ ಗ್ಲಾಸನ್ನು ಕೆಳಗೆ ಸರಿಸಿದಾಗ ಸ್ಕಾರ್ಪಿಯೋ ಕಾರಿನ ಚಾಲಕನು ನವೀನ್ ಅವರ ಕಾರನ್ನು ಬಿಟ್ಟು ಎದುರಿನಿಂದ ಹೋಗುತ್ತಿದ್ದ ಶಾಸಕರ ಕಾರನ್ನು ಫರಂಗಿಪೇಟೆ ಮೀನು ಮಾರ್ಕೆಟ್ ನ ಸ್ವಲ್ಪ ಮುಂದಕ್ಕೆ ತಲುಪುತ್ತಿದ್ದಂತೆ ರಾತ್ರಿ 11.15 ಗಂಟೆಗೆ ತಡೆದಿದ್ದಾನೆ. ಸ್ಕಾರ್ಪಿಯೋ ಕಾರಿನ ಚಾಲಕನು ಶಾಸಕರ ಕಾರಿಗೆ ಅಡ್ಡಲಾಗಿ ಬಂದು ಕಾರಿನ ಚಾಲಕ ಕುಶಿತ್ ರವರನ್ನು ಉದ್ದೇಶಿಸಿ ರಂಡೇ ಮಕ್ಕಳೇ ಎಂದು ಬೈದು ತನ್ನ ಕೈಯಲ್ಲಿದ್ದ ಆಯುಧವನ್ನು ತೋರಿಸಿ ಬೆದರಿಕೆ ಒಡ್ಡಿದ್ದಾನೆ. ಕೂಡಲೇ ನವೀನ್ ಅವರು ಫರಂಗಿಪೇಟೆ ಹೊರಠಾಣೆಯ ಬಳಿ ಕಾರನ್ನು ನಿಲ್ಲಿಸಿದ ಸಮಯ ಸ್ಕಾರ್ಪಿಯೋ ಕಾರನ್ನು ರಭಸವಾಗಿ ಬಿ.ಸಿ.ರೋಡು ಕಡೆಗೆ ಚಲಾಯಿಸಿಕೊಂಡು ಹೋಗಿರುತ್ತಾನೆ ಸ್ಕಾರ್ಪಿಯೋ ಕಾರು ಬಿಳಿ ಬಣ್ಣದ್ದಾಗಿದೆ ಎಂದು ತಿಳಿಸಿದ್ದಾರೆ.