-->

ಪ್ರಿಯಕರನ ಜೊತೆಗೆ ಏಕಾಂತದಲ್ಲಿರುವ ಮಗಳನ್ನು ನೋಡಿದ ಅಪ್ಪ- ಮುಂದೆ ನಡೆದದ್ದು ದುರಂತ!

ಪ್ರಿಯಕರನ ಜೊತೆಗೆ ಏಕಾಂತದಲ್ಲಿರುವ ಮಗಳನ್ನು ನೋಡಿದ ಅಪ್ಪ- ಮುಂದೆ ನಡೆದದ್ದು ದುರಂತ!


ವಿಜಯಪುರ : ಅಪ್ರಾಪ್ತ ವಯಸ್ಕ ಕಾಲೇಜು ವಿದ್ಯಾರ್ಥಿಗಳ ಪ್ರೇಮ ಪ್ರಕರಣ ಹೆತ್ತವರ ವಿರೋಧದಿಂದಾಗಿ ದುರಂತದಲ್ಲಿ ಅಂತ್ಯ ಕಂಡಿದೆ . ಪ್ರಿಯಕರನ ಜತೆ ಏಕಾಂತದಲ್ಲಿದಾಗ ತಂದೆ ನೋಡಿದರೆಂದು ಯುವತಿ ಆತ್ಮಹತ್ಯೆ ಮಾಡಿಕೊಂಡರೆ , ಆಕೆಯ ತಂದೆ ಯುವಕನನ್ನು ಕೊಂದು ಎರಡೂ ಶವಗಳನ್ನು ಕೃಷ್ಣಾ ನದಿಗೆ ಎಸೆದಿರುವ ಘಟನೆ ತನಿಖೆಯಿಂದ ಹೊರಬಂದಿದೆ .

 ಪ್ರಕರಣದ ವಿವರ 
ತಿಕೋಟಾ ಪೊಲೀಸ್ ಠಾಣೆ ಯಲ್ಲಿ ಸೆಪ್ಟೆಂಬರ್ ಮಧ್ಯ ಭಾಗದಲ್ಲಿ ಯುವತಿಯ ಅಪಹರಣ  ಪ್ರಕರಣ ಯುವಕನ  ದಾಖಲಾಗಿತ್ತು . ಹುಡುಕಾಡಿದಾಗ ಯುವಕನ ಶವ ನದಿಯಲ್ಲಿ ಸಿಕ್ಕಿದ್ದು , ತನಿಖೆ ಮುಂದುವರಿಸಿದಾಗ ಯುವತಿಯ ತಂದೆಯೇ ಕೊಂದು ನದಿಗೆಸೆದಿರುವುದು ತಿಳಿದುಬಂದಿದೆ . 

ಪದವಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ತಿಕೋಟಾದ ಘೋಣಸಗಿ ಗ್ರಾಮದ ಯುವಕ ಹಾಗೂ ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿರುವ ಕಳ್ಳಕವಟಗಿಯ ಯುವತಿ ಪ್ರೀತಿಸುತ್ತಿದ್ದರು.

 ವಿಷಯ ತಿಳಿದಾಗ ಎರಡೂ ಮನೆಯವರು ಪಂಚಾಯಿತಿ ನಡೆಸಿ ಬುದ್ಧಿವಾದ ಹೇಳಿದ್ದಾರೆ . ಆದರೆ ಬುದ್ದಿಮಾತಿಗೆ ಪ್ರೇಮಿಗಳು ಬದಲಾಗಿರಲಿಲ್ಲ . ಒಂದು ದಿನ ಮಧ್ಯರಾತ್ರಿ ಯುವತಿಯು ತನ್ನ ಮನೆಯಲ್ಲಿ ಯುವಕನ ಜತೆ ಏಕಾಂತದಲ್ಲಿ ಆಕೆಯ ಇರುವುದನ್ನು ಕಂಡು ತಂದೆ ಆಕ್ರೋಶಗೊಂಡಿದ್ದಾನೆ . ಭೀತಿಯಿಂದ ಯುವತಿ ವಿಷ ಸೇವಿಸಿ ಸ್ಥಳದಲ್ಲೇ ಮಾಡಿಕೊಂಡಿದ್ದಾಳೆ . ಮಗಳ ಆತ್ಮಹತ್ಯೆಯಿಂದ  ಕಂಗಾಲಾದ ತಂದೆ ಯುವಕನ ಕೈಕಾಲು ಕಟ್ಟಿ ಆತನಿಗೂ ವಿಷ ಕುಡಿಸಿ ಕೊಂದು ಹಾಕಿದ್ದಾನೆ.

ಬಳಿಕ ಆತ  ಕೆಲವರೊಂದಿಗೆ ಸೇರಿ ಶವಗಳನ್ನು ಬಾಗಲಕೋಟೆ ಜಿಲ್ಲೆಯ ಬೀಳಗಿ ಠಾಣ ವ್ಯಾಪ್ತಿಯಲ್ಲಿ ಕೃಷ್ಣಾ ನದಿಗೆ ಎಸೆದಿರುವುದು ತನಿಖೆಯಲ್ಲಿ ಬಯಲಾಗಿದೆ .  ಪ್ರಕರಣಕ್ಕೆ  ಸಂಬಂಧಿಸಿದಂತೆ ಯುವತಿಯ ತಂದೆ ಗುರಪ್ಪ ಹಾಗೂ ಸಂಬಂಧಿ ಅಜಿತ್ ಎಂಬವರನ್ನು ಮಲ್ಲಪ್ಪ ಎಂಬವರನ್ನು ಬಂಧಿಸಿದ್ದು , ವೃದ್ಧನಿಗಾಗಿ ಶೋಧ ನಡೆಯುತ್ತಿದೆ .

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99