-->

ಮಳಲಿ ಮಸೀದಿ ವಿವಾದ- ವಿಚಾರಣಾ ನ್ಯಾಯಾಲಯದ ಬಗ್ಗೆ ತೀರ್ಪು ನ.9 ಕ್ಕೆ ಮುಂದೂಡಿಕೆ

ಮಳಲಿ ಮಸೀದಿ ವಿವಾದ- ವಿಚಾರಣಾ ನ್ಯಾಯಾಲಯದ ಬಗ್ಗೆ ತೀರ್ಪು ನ.9 ಕ್ಕೆ ಮುಂದೂಡಿಕೆ


ಮಂಗಳೂರು: ಗಂಜಿಮಠ ಸಮೀಪದ ಮಳಲಿ ಮಸೀದಿಯ ನವೀಕರಣ ಕಾಮಗಾರಿ ಸಂದರ್ಭದಲ್ಲಿ ಪತ್ತೆಯಾದ ಹಿಂದೂ ಶೈಲಿಯ ಕೆತ್ತನೆಯ ವಿಚಾರದಲ್ಲಿ  ಯಾವ ನ್ಯಾಯಾಲಯದಲ್ಲಿ  ವಿಚಾರಣೆ ನಡೆಯಬೇಕು ಎಂದು ಇಂದು ಪ್ರಕಟವಾಗಬೇಕಿದ್ದ ತೀರ್ಪು ನವೆಂಬರ್ 9 ಕ್ಕೆ ಮುಂದೂಡಿಕೆಯಾಗಿದೆ.

ಮಳಲಿ ಮಸೀದಿಯ ನವೀಕರಣ ವೇಳೆ ದೇಗುಲ ಶೈಲಿಯ ಕೆತ್ತನೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ವಿ ಹೆಚ್ ಪಿ ಮಂಗಳೂರಿನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಈ ಬಗ್ಗೆ ಮಸೀದಿ ಆಡಳಿತ ಮಂಡಳಿ ಅರ್ಜಿ ಹಾಕಿ ಈ ವಿಚಾರ ವಕ್ಪ್ ಟ್ರಿಬ್ಯುನಲ್ ಗೆ ಬರುವುದೆಂದು ವಾದಿಸಿದ್ದು,ಈ ಬಗ್ಗೆ ವಾದ ವಿವಾದ ಆಲಿಸಿದ ಕೋರ್ಟ್  ತೀರ್ಪು ಇಂದು ಪ್ರಕಟಿಸಬೇಕಿತ್ತು. ಆದರೆ ಇಂದು ಪ್ರಕಟಿಸಬೇಕಿದ್ದ ತೀರ್ಪನ್ನು ಮಂಗಳೂರು ಸಿವಿಲ್ ಕೋರ್ಟ್  ನವೆಂಬರ್ 9 ಕ್ಕೆ ಮುಂದೂಡಿಕೆ ಮಾಡಿದೆ.


ಈ ವಿಚಾರದಲ್ಲಿ ಇದು ಮೂರನೇ ಬಾರಿ ನ್ಯಾಯಾಲಯದ ತೀರ್ಪು ಮುಂದೂಡಿಕೆಯಾಗಿದೆ. 2022ರ ಎಪ್ರಿಲ್ ನಲ್ಲಿ ಮಳಲಿ ಮಸೀದಿ ನವೀಕರಣದ ವೇಳೆ ಕಟ್ಟಡ ಕೆಡವಿದ ಸಂದರ್ಭದಲ್ಲಿ ಹಿಂದೂ ಶೈಲಿಯ ಮರದ ಕೆತ್ತನೆ ಪತ್ತೆಯಾದ ಬಳಿಕ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸ್ಥಳದಲ್ಲಿ ಪೊಲೀಸ್ ನಿಯೋಜನೆ ಮಾಡಿ ಬಂದೋಬಸ್ತು  ಮಾಡಲಾಗಿತ್ತು‌. ಈ ನಡುವೆ ಹಿಂದೂ ಸಂಘಟನೆಗಳುತಾಂಬೂಲ ಪ್ರಶ್ನಾ ಚಿಂತನೆ ಇರಿಸಿದಾಗ
ಮಸೀದಿಯಲ್ಲಿ ಈ ಹಿಂದೆ ಗುರುಸಾನಿಧ್ಯ ಇದ್ದ ಬಗ್ಗೆ ಗೋಚರವಾಗಿತ್ತು. ಆ ಬಳಿಕ ಈ ವಿಚಾರದಲ್ಲಿ ವಿಎಚ್ ಪಿ‌ ಕಾನೂನು ಸಮರ ನಡೆಸಲು ನಿರ್ಧರಿಸಿ ನ್ಯಾಯಾಲಯ ಮೆಟ್ಟಿಲೇರಿತ್ತು.2022 ಮೇ ತಿಂಗಳಿನಿಂದ ಮಂಗಳೂರು ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಲ್ಲಿ ಮಳಲಿ ಮಸೀದಿ ವಿಚಾರದಲ್ಲಿ ವಿಚಾರಣೆ ನಡೆಯುತ್ತಿದ್ದು, 
ಸೆ.27ರಂದು ತೀರ್ಪು ಹೊರಬೀಳಬೇಕಿತ್ತು.ಆದರೆ ಅ.17ಕ್ಕೆ ತೀರ್ಪು ನ್ನು ನ್ಯಾಯಾಲಯ ಮುಂದೂಡಿತ್ತು. ಇದೀಗ ತೀರ್ಪನ್ನು ನವೆಂಬರ್ 9 ಕ್ಕೆ ಮುಂದೂಡಲಾಗಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99