-->

ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ

ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆಒಂದೇ ಸೂರಿನಡಿ 12 ಸಾವಿರಕ್ಕೂ ಅಧಿಕ ಉದ್ಯೋಗಾವಕಾಶ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ 12ನೇ ಆವೃತ್ತಿಯ ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳಕ್ಕೆ ವಿದ್ಯಾಗಿರಿಯ ಶ್ರೀಮತಿ ಸುಂದರಿ ಆನಂದ ಆಳ್ವ ಕ್ಯಾಂಪಸ್‌ನಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು. ಪ್ರಸ್ತಾವಿಕವಾಗಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ, ಪ್ರತಿವರ್ಷ ಕೋಟ್ಯಾಂತರ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪೂರೈಸಿ ಉದ್ಯೋಗ ಆರಿಸಲು ಮುಂದಾಗುತ್ತಾರೆ. ಅಂತಹವರಿಗೆ ನೆರವಾಗುವುದೇ ಆಳ್ವಾಸ್ ಪ್ರಗತಿಯ ಉದ್ದೇಶ. ಪ್ರತಿಯೊಬ್ಬ ವಿದ್ಯಾರ್ಥಿಯೂ ಸವಕಲು ನಾಣ್ಯಗಳಾಗದೇ, ಚಲಾವಣೆಯಲ್ಲಿರುವ ನಾಣ್ಯಗಳಾಗಬೇಕು. ಆಗ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಸಿಗುವುದೂ ಸುಲಭವಾಗುತ್ತದೆ. ಪ್ರತಿಯೊಬ್ಬರಿಗೂ ಉತ್ತಮ ಉದ್ಯೋಗ ಲಭಿಸಿ, ಆ ಸಂಪತ್ತಿನ ಒಂದಷ್ಟು ಭಾಗವನ್ನು ಸಮಾಜಕ್ಕೆ ಅರ್ಪಿಸುವಂತಾಗಬೇಕು ಎಂದರು.
ದೇಶದಲ್ಲಿ 30 ಲಕ್ಷಕ್ಕೂ ಅಧಿಕ ಸರ್ಕಾರಿ ಮತ್ತು 17 ಲಕ್ಷಕ್ಕೂ ಅಧಿಕ ಖಾಸಗಿ ಕಂಪನಿಗಳಲ್ಲಿ ಉದ್ಯೋಗಾವಕಾಶಗಳು ಇದ್ದರೂ, ಅವುಗಳ ಬಗೆಗಿನ ಸರಿಯಾದ ತಿಳುವಳಿಕೆ ಮತ್ತು ಉದ್ಯೋಗ ಪಡೆಯಲು ಬೇಕಾದ ತಯಾರಿಯಿಲ್ಲದ ಕಾರಣ ಹಾಗೂ ಕೌಶಲ್ಯಗಳ ಕೊರತೆಯಿಂದ ಯುವಜನತೆ ನಿರುದ್ಯೋಗಿಗಳಾಗಿಯೇ ಉಳಿಯುತ್ತಿದ್ದಾರೆ. ಕೇವಲ 5% ಜನರು ಮಾತ್ರವೆ ಸ್ವ - ಉದ್ಯಮದಲ್ಲಿ ತೊಡಗುತ್ತಾರೆ. ದೇಶದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಸಾಕಷ್ಟು ಅವಕಾಶಗಳಿದ್ದರೂ, ಕೆಲಸ ಹುಡುಕುವ ಹಾಗೂ ಸಂದರ್ಶನಗಳನ್ನು ಎದುರಿಸುವ ಛಲ ಹೆಚ್ಚಾಗಬೇಕಾಗಿದೆ. ಆಳ್ವಾಸ್ ಪ್ರಗತಿಯಂತಹ ಉದ್ಯೋಗ ಮೇಳ ಏಕಕಾಲಕ್ಕೆ ನೂರಾರು ಕಂಪೆನಿಗಳನ್ನು ಒಂದೇ ಕಡೆ ಸೇರಿಸಿ, ಅಭ್ಯರ್ಥಿಗಳಿಗೆ ಸರಿಯಾದ ಮಾರ್ಗದರ್ಶನವನ್ನು ನೀಡುವ ಮೂಲಕ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ಕೆಲಸ ಮಾಡುತ್ತಿದೆ ಎಂದರು.
ಈ ಬಾರಿಯ ಆಳ್ವಾಸ್ ಪ್ರಗತಿಯಲ್ಲಿ 12,000ಕ್ಕೂ ಅಧಿಕ ಹುದ್ದೆಗಳಿಗೆ ಅವಕಾಶವಿದ್ದು, ಮ್ಯಾನುಫ್ಯಾಕ್ಚರಿಂಗ್, ಐಟಿ-ಐಟಿಇಎಸ್, ಸೇಲ್ಸ್, ರಿಟೈಲ್ ಬ್ಯಾಂಕಿAಗ್ ಮತ್ತು ಹಣಕಾಸು, ಹೆಲ್ತ್ಕೇರ್, ಟೆಲಿಕಾಂ, ಮಾಧ್ಯಮ ಮತ್ತು ಶಿಕ್ಷಣ ಅಲ್ಲದೇ ಎನ್‌ಜಿಓಗಳನ್ನು ಪ್ರತಿನಿಧಿಸುವ 200ಕ್ಕೂ ಅಧಿಕ ಉನ್ನತ ಕಂಪೆನಿಗಳು ನೇಮಕಾತಿ ನಡೆಸಲಿವೆ ಎಂದು ತಿಳಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೂಲ್ಕಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್, ಆಳ್ವಾಸ್‌ನಂತಹ ವಿದ್ಯಾಸಂಸ್ಥೆ ನನ್ನ ಕ್ಷೇತ್ರದಲ್ಲಿ ಇರುವುದೇ ಹೆಮ್ಮೆಯ ಸಂಗತಿ. ಇಲ್ಲಿ ಆಯೋಜನೆ ಆಗುವ ಎಲ್ಲಾ ಕಾರ್ಯಕ್ರಮಗಳೂ ಅರ್ಥಪೂರ್ಣವಾಗಿರುತ್ತದೆ. ಆಳ್ವಾಸ್ ಪ್ರಗತಿ ಉದ್ಯೋಗ ಮೇಳವು ನೂರಾರು ಕಂಪನಿಗಳನ್ನು ಒಂದೇ ಸೂರಿನಡಿ ತಂದು, ವಿವಿಧ ಕಾಲೇಜುಗಳಲ್ಲಿ ಪದವಿ ಪೂರೈಸಿ ಉದ್ಯೋಗ ಹುಡುಕಾಟದಲ್ಲಿರುವವರಿಗೆ ಅವಕಾಶ ಮಾಡಿಕೊಟ್ಟಿದೆ. ಒಬ್ಬರಿಗೆ ಉದ್ಯೋಗ ದೊರಕಿಸಿ ಕೊಡುವುದು ಎಂದರೆ ಒಂದು ಮನೆಗೆ ಅನ್ನ ಕೊಟ್ಟ ತೃಪ್ತಿ ಸಿಗಲಿದೆ ಎಂದರು.
ಈ ಸಂದರ್ಭ, ಯಶಸ್ವಿ ಉದ್ಯಮಿಗಳಾದ ಎಕ್ಸ್ಪರ್ಟೈಸ್ ಕಂಪನಿ ಸಿಇಒ ಮೊಹಮ್ಮದ್ ಅಶ್ರಫ್, ಇಂಡೋ ಮಿಮ್ ಪ್ರೆöÊ. ಲಿ. ನ ಪ್ರಧಾನ ಎಚ್‌ಆರ್ ವೆಂಕಟರಮಣ ಪಿ ಹಾಗೂ ಮಶ್ರೆಕ್ ಗ್ಲೋಬಲ್ ನೆಟ್ವರ್ಕ್ ಸಂಸ್ಥೆಯ ಗ್ರೂಪ್ ರಿಯಲ್ ಎಸ್ಟೇಟ್ ಮತ್ತು ಫೆಸಿಲಿಟಿ ಮ್ಯಾನೇಜ್ಮೆಂಟ್ ವಿಭಾಗದ ಮುಖ್ಯಸ್ಥ ಜಯರಾಮ್ ಅವರನ್ನು ಸನ್ಮಾನಿಸಲಾಯಿತು.
ಆಳ್ವಾಸ್ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಮೊದಲ ದಿನದ ವಿಶೇಷತೆಗಳು
ಬಾಕ್ಸ್: 
ಆಳ್ವಾಸ್ ಪ್ರಗತಿ ಉದ್ಯೋಗ ಮೇಳವು ಶಿಸ್ತು ಬದ್ಧವಾಗಿ ಆಯೋಜನೆಗೊಂಡಿದ್ದು, ನೋಂದಣಿ ಕೇಂದ್ರ ಹಾಗೂ ಒಟ್ಟು ನಿರ್ವಹಣೆ ಬಹಳ ಅಚ್ಚುಕಟ್ಟಾಗಿದೆ. ಸ್ವಯಂ ಸೇವಕರು ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಕಂಡು ಬಂತು. ವಿದೇಶಿ ಕಂಪೆನಿಗಳಿಗೂ ಇಲ್ಲಿಂದಲೇ ಸಂದರ್ಶನ ನೀಡುವ ಅವಕಾಶವಿರುವುದರಿಂದ ಸುಲಭ ಸಾಧ್ಯವಾಗಿದೆ. ಇಂತಹ ಅವಕಾಶವನ್ನು ಸೃಷ್ಟಿಸಿದ ಆಳ್ವಾಸ್‌ಗೆ ಅಭಾರಿಯಾಗಿದ್ದೇನೆ. 
ಸೌಜನ್ಯ, ಮ್ಯಾಪ್ಸ್ ಕಾಲೇಜು, ಮಂಗಳೂರು  
 
ಈ ಬಾರಿಯ ಉದ್ಯೋಗ ಮೇಳದಲ್ಲಿ ಪದವಿ, ಎಂಬಿಎ ಹಾಗೂ ಇಂಜಿನಿಯರಿAಗ್ ಪದವೀಧರರಿಗೆ ಉತ್ತಮ ದರ್ಜೆಯ  ಉದ್ಯೋಗಾವಕಾಶಗಳು ಲಭ್ಯವಿದ್ದು, ಎರಡನೆ ದಿನ ನಡೆಯುವ ಉದ್ಯೋಗ ಮೇಳದಲ್ಲಿ ಉದ್ಯೋಗಾಕಾಂಕ್ಷಿಗಳು ಆಗಮಿಸಿ, ಇರುವ ಅವಕಾಶವನ್ನು ಬಳಸಿಕೊಳ್ಳಬಹುದು
ವಿವೇಕ್ ಆಳ್ವ, ಟ್ರಸ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ


ಪ್ರತಿಷ್ಠಿತ ಕಂಪೆನಿಗಳಾದ ಅಮೇಜಾನ್, ಉಜ್ಜೀವನ್ ಸ್ಮಾಲ್ ಫಿನಾನ್ಸ್ ಬ್ಯಾಂಕ್, ಬಿಟಾ ಸಿಎಇ ಸಿಸ್ಟಮ್ಸ್ ಇಂಡಿಯಾ ಪ್ರೆöÊ.ಲಿ, ಇಎಕ್ಸ್ಎಲ್ ಸರ್ವೀಸಸ್, ನೆಟ್‌ಮೇಡ್ಸ್ ,ನಾರಾಯಣ ಹೃದಯಾಲಯ ಸ್ಪೆಷಾಲಿಟಿ ಹಾಸ್ಪಿಟಲ್, ಫೋರ್ಟಿಸ್ ಹಾಸ್ಪಿಟಲ್,  ಎಕ್ಸರ‍್ಟೆöÊಸ್ ಮೊದಲ ದಿನ ಸಂದರ್ಶನ ನಡೆಸಿದವು. 
ಆನ್‌ಲೈನ್ ನೋಂದಣಿ ಮಾಡಿಸಿದ ಉದ್ಯೋಗಾಕಾಂಕ್ಷಿಗಳು: 8248
ಸ್ಪಾಟ್ ನೋಂದಣಿ ಮಾಡಿಸಿದ ಅಭ್ಯರ್ಥಿಗಳು: 792
ಉದ್ಯೋಗ ಮೇಳಕ್ಕೆ ಆಗಮಿಸಿದ ಕಂಪನಿಗಳು: 216
ಮೊದಲ ದಿನ ಆಗಮಿಸಿದ ಉದ್ಯೋಗಕಾಂಕ್ಷಿಗಳು: 5818
ಆಳ್ವಾಸ್ ಪ್ರಗತಿ- 2022

2007ರಿಂದ ನಡೆದು ಬರುತ್ತಿರುವ ಆಳ್ವಾಸ್ ಪ್ರಗತಿ ಉದ್ಯೋಗ ಮೇಳ ಸಾವಿರಾರು ನಿರುದ್ಯೋಗಿಗಳಿಗೆ, ಗ್ರಾಮೀಣ ಭಾಗದ ಪ್ರತಿಭಾವಂತರಿಗೆ ಉದ್ಯೋಗ ಸಿಗುವಲ್ಲಿ ನೆರವಾಗಿದೆ. 
ಭಾರತದಲ್ಲಿ 2021-22ನೇ ಸಾಲಿನಲ್ಲಿ ನಿರುದ್ಯೊಗಿಗಳ ಸಂಕ್ಯೆ 3.33 ಕೋಟಿಗೆ ಏರಿಕೆಯಾಗಿದ್ದು, ಲಕ್ಷಗಟ್ಟಲೆ ಜನ ಉದ್ಯೊಗ ಸಿಗದೆ ಕೆಲಸದ ಹುಟುಕಾಟವನ್ನೆ ನಿಲ್ಲಿಸಿದ್ದಾರೆ. ಕೊರೊನಾ ಬಿಕ್ಕಟ್ಟಿನ ಅವಧಿಯಲ್ಲಿ ಸುಮಾರು 67 ಲಕ್ಷ ಮಂದಿ ಕೆಲಸ ಕಳೆದುಕೊಂಡು ಈಗಲೂ ಉದ್ಯೊಗ ಸಿಗದೆ ಒದ್ದಾಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ನಿರುದ್ಯೋಗ 3.48% ನಿರುದ್ಯೋಗ ದರ ಇದೆ .


ಈ ಅಂಕಿ ಅಂಶಗಳನ್ನು ಗಮನಿಸಿದರೆ ದೇಶದಲ್ಲಿ ಉದ್ಯೋಗಗಳಿಗೆ ಸಾಕಷ್ಟು ಅವಕಾಶವಿದ್ದರೂ, ಯುವ ಜನತೆಯಲ್ಲಿ ಕೆಲಸ ಹುಡುಕುವ ಹಾಗೂ ಸಂದರ್ಶನಗಳನ್ನು ಎದುರಿಸುವ ಛಲ ಹೆಚ್ಚಾಗಬೇಕಾಗಿದೆ. ಆಳ್ವಾಸ್ ಪ್ರಗತಿಯಂತಹ ಉದ್ಯೋಗ ಮೇಳ ಏಕಕಾಲಕ್ಕೆ ನೂರಾರು ಕಂಪೆನಿಗಳನ್ನು ಒಂದೇ ಕಡೆ ಸೇರಿಸಿ, ಅಭ್ಯರ್ಥಿಗಳಿಗೆ ಸರಿಯಾದ ಮಾರ್ಗದರ್ಶನವನ್ನು ನೀಡುವ ಮೂಲಕ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವಲ್ಲಿ ಉತ್ತಮ ಪ್ರಯತ್ನವಾಗಿದೆ.
ಆಳ್ವಾಸ್ ಪ್ರಗತಿ- 2022 ವಿಶೇಷತೆಗಳು

ಆಳ್ವಾಸ್ ಪ್ರಗತಿಯಲ್ಲಿ ಅಭ್ಯರ್ಥಿಗಳ ಅನುಕೂಲಕ್ಕಾಗಿ ವಿವಿಧ ವಿಧ್ಯಾಭ್ಯಾಸಗಳಿಗೆ ಅನುಗುಣವಾಗಿ ಕಲರ್ ಕೋಡಿಂಗ್ ವ್ಯವಸ್ಥೆಯಿದ್ದು, ಸಂಪೂರ್ಣ ಉದ್ಯೋಗ ಮಾಹಿತಿಯನ್ನೊಳಗೊಂಡ ಮಾಹಿತಿ ಕೈಪಿಡಿಯನ್ನು ಪ್ರತಿ ನೋಂದಾಯಿತ ಅಭ್ಯರ್ಥಿಗೆ ನೀಡಲಾಗುವುದು. ಉದ್ಯೋಗ ಮಾಹಿತಿ ಕೇಂದ್ರದಲ್ಲಿ ಆಯಾ ಹುದ್ದೆಗಳಿಗೆ ಸಂಬAಧಿಸಿದ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಾಗುವುದು. ಈ ಉದ್ಯೋಗ ಮೇಳವು ಯಶಸ್ವಿಯಾಗಿ ನಡೆಯಲು 800 ಸ್ವಯಂಸೇವಕರನ್ನೊಳಗೊAಡ ತಂಡವು ಕಾರ್ಯೋನ್ಮುಖವಾಗಲಿದೆ. ಈ ಬಾರಿ ಮ್ಯಾನುಫೆಕ್ಚರಿಂಗ್ ವಲಯದಲ್ಲಿ ಮೆಕ್ಯಾನಿಕ್ ವಿಭಾಗಕ್ಕೆ ಹೆಚ್ಚಿನ ಅವಕಾಶಗಳಿದ್ದು, ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಿಎಸ್‌ಆರ್ ಚಟುವಟಿಕೆಯಾಗಿ ಆಳ್ವಾಸ್ ಪ್ರಗತಿಯನ್ನು ನಡೆಸಲಾಗುತ್ತಿದ್ದು, ಸಾಮಾಜಿಕ ಸೇವಾ ಮನೋಭಾವದಿಂದ ಉದ್ಯೋಗ ಮೇಳದ ಸಂಪೂರ್ಣ  ವೆಚ್ಚವನ್ನು ಸಂಸ್ಥೆಯೇ ಭರಿಸುತ್ತಿರುವುದು ವಿಶೇಷವಾಗಿದೆ. ಈ ಹಿಂದೆ ಚಿಕ್ಕಬಳ್ಳಾಪುರದಲ್ಲಿ 3 ಬಾರಿ, ಮಂಗಳೂರಿನಲ್ಲಿ 2 ಬಾರಿ ಹಾಗೂ ಬೆಳ್ತಂಗಡಿಯ ಶ್ರಮಿಕ ಉದ್ಯೋಗ ಮೇಳ ನಡೆಸಿದ ಕೀರ್ತಿ ಹೊಂದಿದೆ. ಆಳ್ವಾಸ್ ಪ್ರಗತಿ ಇದೀಗ 12ನೇ ಬಾರಿ ನಡೆಯುತ್ತಿದ್ದು, ಭಾರತದಾದ್ಯಂತ ಅರ್ಹ ಅಭ್ಯರ್ಥಿಗಳಿಗೆ ಭಾಗವಹಿಸುವ ಮುಕ್ತ ಅವಕಾಶವಿದೆ.
 
ಇದುವರೆಗೆ ಆಳ್ವಾಸ್ ಸಹಭಾಗಿತ್ವದ ಉದ್ಯೋಗ ಮೇಳಗಳಲ್ಲಿ ಹಾಗೂ ಆಳ್ವಾಸ್ ಪ್ರಗತಿಯಲ್ಲಿ 25 ಲಕ್ಷದಷ್ಟು ಅಭ್ಯರ್ಥಿಗಳು ಪಾಲ್ಗೊಂಡಿದ್ದು, 75,000ಕ್ಕೂ ಅಧಿಕ ಉದ್ಯೋಗಕಾಂಕ್ಷಿಗಳಿಗೆ ಉದ್ಯೋಗ ಲಭಿಸಿರುವುದು ಗಮನಾರ್ಹ ಸಾಧನೆಯಾಗಿದೆ.  ಆಳ್ವಾಸ್ ಪ್ರಗತಿಯ ಇನ್ನೊಂದು ವಿಶೇಷತೆಯೆಂದರೆ ಇಲ್ಲಿ ಯಾವುದೇ ಕನ್ಸಲ್ಟೆನ್ಸಿ ಕಂಪೆನಿಗಳಿಗೆ ಅವಕಾಶವಿಲ್ಲ ಬದಲಾಗಿ ಪ್ರತಿಷ್ಠಿತ ಉನ್ನತ ಕಂಪೆನಿಗಳು ಮಾತ್ರವೇ ನೇಮಕಾತಿ ಮಾಡಲಿವೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99