-->

ನಟಿ ದಿವ್ಯಾ ಶ್ರೀಧರ್ ( DIVYA SRIDHAR) ಗೆ ಪತಿ ಅಮ್ಜದ್ ಖಾನ್ ನಿಂದ ಹಲ್ಲೆ- ವಿಡಿಯೋ ಮಾಡಿ ಆರೋಪ

ನಟಿ ದಿವ್ಯಾ ಶ್ರೀಧರ್ ( DIVYA SRIDHAR) ಗೆ ಪತಿ ಅಮ್ಜದ್ ಖಾನ್ ನಿಂದ ಹಲ್ಲೆ- ವಿಡಿಯೋ ಮಾಡಿ ಆರೋಪ


ವಿಚಿತ್ರ ಪ್ರೇಮಿ, ಹುಚ್ಚುಡುಗಿ, ಹೀಗೂ ಉಂಟಾ, ಸಾಚಾ ಸೇರಿದಂತೆ ಹಲವು ಸಿನಿಮಾಗಳಲ್ಲೂ ನಟಿಸಿದ್ದು, ಆಕಾಶ ದೀಪ ಧಾರಾವಾಹಿಯ ಮೂಲಕ ಸಖತ್ ಫೇಮಸ್ ಆಗಿದ್ದ ಸ್ಯಾಂಡಲ್ ವುಡ್ ನಟಿ ಹಾಗೂ ಕಿರುತೆರೆಯ ಖ್ಯಾತ ನಟಿ ದಿವ್ಯಾ ಶ್ರೀಧರ್ ( DIVYA SRIDHAR)  ತಮ್ಮ ಗಂಡನಿಂದ ದೈಹಿಕ ಕಿರುಕುಳಕ್ಕೆ ಒಳಗಾಗಿರುವುದಾಗಿ ಆರೋಪಿಸಿದ್ದಾರೆ. ದಿವ್ಯಾ ಶ್ರೀಧರ್ ಸದ್ಯ ಅವರು ಗಂಡನಿಂದ ತೀವ್ರ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು,  ಆಸ್ಪತ್ರೆಗೆ ದಾಖಲಾಗಿದ್ದಾರೆ. ಪತಿ ಅರ್ನವ್ ಯಾನೆ ಅಮ್ಜದ್ ಖಾನ್  ವಿರುದ್ಧ ವಿಡಿಯೋ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


 ವಿಡಿಯೋದಲ್ಲಿ ಮಾತನಾಡಿರುವ ಅವರು ‘ನಾನು ಮತ್ತು ಅರ್ನವ್ ಯಾನೆ ಅಮ್ಜದ್ ಖಾನ್ ಇತ್ತೀಚೆಗೆ ಮದುವೆಯಾಗಿದ್ದೇವೆ. 2017ರಿಂದ ನಾನು ಮತ್ತು ಅರ್ನವ್  ಲಿವಿಂಗ್ ಟು ಗೆದರ್ ನಲ್ಲಿ ಇದ್ದೆವು.  ಐದು ವರ್ಷದಿಂದ ನಾವು ಒಟ್ಟಿಗೆ ಇದ್ದೇವೆ. ಮನೆ ತೆಗೆದುಕೊಳ್ಳಲು ಆತನಿಗೆ ನಾನೇ ಹಣಕಾಸಿನ ನೆರವನ್ನು ನೀಡಿದ್ದೇನೆ. ಮದುವೆಗಿಂತ ಮೊದಲು ಲಾಕ್‍ಡೌನ್ ಟೈಂನಲ್ಲಿ ಆತನಿಗೆ ಏನು ಕೆಲಸ ಇರಲಿಲ್ಲ. ಕೆಲಸವಿಲ್ಲದೇ ಮನೆಯಲ್ಲಿ ಇದ್ದಾಗ  30 ಲಕ್ಷ ಸಾಲ ಕೊಡಿಸಿ, 30 ಸಾವಿರದಂತೆ  ಇಎಂಐ  ಕಟ್ಟಿದ್ದೇನೆ. ಅವನಿಗೆ ಕೆಲಸವಿಲ್ಲದಿದ್ದರೂ, ಆತನನ್ನು ಮಗುವಿನ ತರಹ ಅವನಿಗೆ ಏನೂ ಆಗದಂತೆ ಜೋಪಾನವಾಗಿ ನೋಡಿದ್ದೇನೆ. ಆದರೆ,  ಈಗ ಅವನಿಂದಲೇ
 ಕಿರುಕುಳ  ಉಂಟಾಗಿದೆ’ ಎಂದಿದ್ದಾರೆ.

 ‘ನಿನ್ನೆ ನನ್ನ ಗಂಡ ಅರ್ನವ್ ಹಲ್ಲೆ ಮಾಡಿದ್ದಾನೆ. ಕೆಳಗೆ ಬಿದ್ದು ಹೊಟ್ಟೆಯ ಭಾಗಕ್ಕೆ ನೋವಾಗಿದೆ. ಕೈಕಾಲನ್ನೆಲ್ಲಾ ತುಳಿದ ಕಾರಣ ನೋವು ತಡೆಯಲಾಗದೇ ಒದ್ದಾಡಿದ್ದೇನೆ. ಆಗ ಲೋ ಬಿಪಿಯಾಗಿ ಅಸ್ವಸ್ಥಳಾಗಿದ್ದು ತುಂಬಾ ಸಮಯವಾದ ಮೇಲೆ ನನಗೆ ಪ್ರಜ್ಞೆ ಬಂದಿದೆ. ನನ್ನ ಗಂಡ ಮನೆಯಲ್ಲೇ ಇದ್ದರೂ ನನ್ನನ್ನು ಆಸ್ಪತ್ರೆಗೆ ಸೇರಿಸಲಿಲ್ಲ. ನನಗೆ ಪ್ರಜ್ಞೆ ಬಂದ ಮೇಲೆ ಮನೆಯಿಂದ ಹೊರಗಡೆ ಹೋದ. ಅಲ್ಲದೇ ಹೊಟ್ಟೆ ನೋವಿನಿಂದ ನಾನು ನರಳಿದ್ದು,ಮರುದಿನ ಬೆಳಗ್ಗೆ ಅತೀವ ರಕ್ತಸ್ರಾವ ವಾಗಿದೆ ಎಂದಿದ್ದಾರೆ.

ದಿವ್ಯಾ ಶ್ರೀಧರ್ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊಟ್ಟೆಗೆ ತುಂಬಾ ಪೆಟ್ಟಾಗಿರೋದ್ರಿಂದ ಯಾವಾಗ ಬೇಕಿದ್ದರು ಗರ್ಭಪಾತವಾಗಬಹುದು ಎಂದು ವೈದ್ಯರು ಹೇಳಿದ್ದಾರಂತೆ.  ‘

ದಿವ್ಯಾ ಶ್ರೀಧರ್  ಇದೀಗ ತಮಿಳಿನ ಧಾರಾವಾಹಿವೊಂದರಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99