ಜೈನ ಭಗವತಿ ದೀಕ್ಷೆ ಪಡೆದ 25 ವರ್ಷದ ಯುವತಿ!
Thursday, October 6, 2022
ರಾಯಚೂರು: ರಾಯಚೂರು ಜಿಲ್ಲೆಯ ಸ್ನೇಹಾ ಭಂಡಾರಿ ( SNEHA BHANDARY) ಎಂಬ ಯುವತಿಯೊಬ್ಬಳು ತನ್ನ ಪಾಲಿನ ಆಸ್ತಿ ಸಂಪತ್ತನ್ನೆಲ್ಲಾ ಬಿಟ್ಟು ಅತ್ಯಂತ ಕಠಿಣ ಆಚರಣೆಯ ಜೈನ್ ಭಗವತಿ ದೀಕ್ಷೆ ಪಡೆದುಕೊಂಡಿದ್ದಾಳೆ.
ರಾಯಚೂರು ನಗರದ ವ್ಯಾಪಾರಿಯಾಗಿರುವ ಜ್ಞಾನಚಂದ್ ಭಂಡಾರಿ ಎಂಬವರ ಪುತ್ರಿ 25 ವರ್ಷದ ಸ್ನೇಹ ಭಂಡಾರಿ ಜೈನ್ ಭಗವತಿ ದೀಕ್ಷೆ ಪಡೆದುಕೊಂಡವರು. ವ್ಯಾಪಾರಿ ಯ ಪುತ್ರಿ ಈಗ ಅಲೌಕಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬಿ.ಕಾಂ ಪದವೀಧರೆಯಾಗಿರುವ ಸ್ನೇಹಾ ಭಂಡಾರಿ, ರಾಯಚೂರಿನ ಎಸ್‍ಆರ್‍ಪಿಎಸ್ ಪಿಯು ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೈನ್ ಭಗವತಿ ದೀಕ್ಷೆ ಪಡೆದು ಸಾದ್ವಿ ಚೇಷ್ಟಾಶ್ರೀ ಆಗಿದ್ದಾರೆ.
ಜೈನ ದೀಕ್ಷೆಯನ್ನ ಪಡೆಯಬೇಕು ಅಂದ್ರೆ ಆಧ್ಯಾತ್ಮದ ಆಳವನ್ನು ಅರಿತಿರಬೇಕಾಗುತ್ತದೆ. ದೀಕ್ಷೆಯನ್ನು ಪಡೆದವರು ಸದಾ ಬರಿಗಾಲಿನಲ್ಲೇ ನಡೆಯಬೇಕು. ತಲೆಗೆ ಬೂದಿ ಹಚ್ಚಿ ಕೂದಲನ್ನು ಕೀಳಬೇಕು. ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡಿ ಊಟ ಮಾಡಬೇಕು. ಸ್ವತಃ ಅಡುಗೆ ಮಾಡುವಂತೆಯು ಇಲ್ಲ, ಅಡುಗೆ ಮಾಡಲು ಯಾರನ್ನೂ ನೇಮಿಸಿಕೊಳ್ಳುವಂತೆಯು ಇಲ್ಲ. ಎಷ್ಟೇ ದೂರದ ಪ್ರಯಾಣವಿದ್ದರೂ ವಾಹನ ಬಳಸುವಂತಿಲ್ಲ. ವಿದ್ಯುತ್ ಲೈಟ್, ಮೊಬೈಲ್, ಫ್ಯಾನ್, ಎಸಿ, ಟಿವಿ ಯಾವುದನ್ನೂ ಬಳಸುವಂತೆ ಇಲ್ಲ. ಸೂರ್ಯಾಸ್ತದ ನಂತರ ಕತ್ತಲಲ್ಲೆ ಕಾಲ ಕಳೆಯಬೇಕು. ಇಂತಹ ಕಠಿಣ ನಿಯಮಗಳು ಪಾಲಿಸಬೇಕಾಗುತ್ತದೆ.