ಹಿಂದೂ ಯುವಕನಿಗೆ ಬಲವಂತವಾಗಿ ಮುಂಜಿ ಮಾಡಿಸಿ ಇಸ್ಲಾಂಗೆ ಮತಾಂತರ - ಇಬ್ಬರ ಬಂಧನ
Thursday, October 6, 2022
ಬೆಂಗಳೂರು : ಹಿಂದೂ ಯುವಕನಿಗೆ ಬಲವಂತವಾಗಿ ಮುಂಜಿಯನ್ನು ಮಾಡಿಸಿ ಮುಸ್ಲಿಂ ಧರ್ಮಕ್ಕೆ ಮಾತಾಂತರ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ .
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಮೊಹಮ್ಮದ್ ಅಸಾನ್ ಅಲಿಯಾಸ್ ಅತ್ತಾರ್ವ ರಹಮಾನ್ ( 45 ) ಮತ್ತು ಬನಶಂಕರಿಯ ಕಾವೇರಿನ ನಗರ ನಿವಾಸಿ ಶಬೀರ್ ( 34 ) ಬಂಧಿತ ಆರೋಪಿಗಳು.
ಈ ಇಬ್ಬರು ಆರೋಪಿಗಳು ಕೆಲ ದಿನಗಳ ಹಿಂದೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಶ್ರೀಧರ್ ಎಂಬಾತನಿಗೆ ಮತಾಂತರ ಮಾಡಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು . ಆರೋಪಿಗಳ ವಿರುದ್ಧ ಮತಾಂತರ ಹಾಗೂ ಎಸ್ಸಿ ಮತ್ತು ಎಸ್ಟಿ ಕಾಯ್ದೆ ಅಡಿ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದರು.
ಮಂಡ್ಯ ಜಿಲ್ಲೆ ಮದ್ದೂರ ತಾಲೂಕಿನ ಶ್ರೀಧರ್ ( 24 ) ಎಂಬಾತ ಡಿಪ್ಲೊಮಾ ವ್ಯಾಸಂಗ ಮಾಡಿದ್ದನು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಶ್ರೀಧರ್ ಗೆ ಪರಿಚಯವಾಗಿದ್ದ ಶಬೀರ್ ಎಂಬಾತನ ಬಳಿ ತನ್ನ ಆರ್ಥಿಕ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದಾನೆ . ಈ ವೇಳೆ ಆರೋಪಿ ಮತಾಂತರ ಮಾಡಿಕೊಂಡರೆ ಹಣ ಸಿಗುವುದಾಗಿ ಆಮಿಷವನ್ನು ಒಡ್ಡಿದ್ದಾನೆ .
ಈ ಆಮೀಷಕ್ಕೆ ಶ್ರೀಧರ್ ಒಪ್ಪಿಕೊಂಡಿದ್ದಾನೆ . ಬಳಿಕ ಆತನಿಗೆ ಮುಂಜಿ ಮಾಡಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ . ನಂತರ ಮಸೀದಿಯೊಂದಕ್ಕೆ ಕರೆದೊಯ್ದು ಅಕ್ರಮವಾಗಿ ಗೃಹ ಬಂಧನದಲ್ಲಿರಿಸಲಾಗಿತ್ತು. ಅದನ್ನು ವಿರೋಧಿಸಿದಾಗ ಬೆದರಿಸಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದರು . ಒಂದು ವೇಳೆ ಈ ವಿಷಯವನ್ನು ಬಾಯಿಬಿಟ್ಟರೆ ಉಗ್ರ ಎಂದು ವಿಡಿಯೋ ಹರಿಯಬಿಡುವುದಾಗಿ ಬೆದರಿಸಿದ್ದಾರೆ . ಜತೆಗೆ ವರ್ಷಕ್ಕೆ ಮೂವರನ್ನು ಕರೆ ತಂದು ಮತಾಂತರಿಸಬೇಕು ಎಂದು ಒತ್ತಾಯಿಸಿದ್ದರು ಎಂದು ಶ್ರೀಧರ್ ಆರೋಪಿಸಿದ್ದಾನೆ ಎಂದು ಪೊಲೀಸರು ಹೇಳಿದರು .