-->

ಹುಡುಗನ ತೊಡೆ ಸವರಿ ವಜಾಗೊಂಡ ಸಚಿವ CONOR BURNS !

ಹುಡುಗನ ತೊಡೆ ಸವರಿ ವಜಾಗೊಂಡ ಸಚಿವ CONOR BURNS !


ಲಂಡನ್ : ಅಧಿಕಾರ ವಹಿಸಿಕೊಂಡು ಎರಡು  ತಿಂಗಳು ತುಂಬುವ ಮೊದಲು ಬ್ರಿಟನ್ ಪ್ರಧಾನಿ ಲಿಜ್ ಟ್ರಸ್ ಅವರು ಹುಡುಗನ ತೊಡೆ ಸವರಿದ ಆರೋಪದ ಹಿನ್ನೆಲೆಯಲ್ಲಿ ಕೊನರ್ ಬರ್ನ್ ( CONOR BURNS)
 ಅವರನ್ನು ಸಚಿವ ಸ್ಥಾನದಿಂದ ಕಿತ್ತೊಗೆದಿದ್ದಾರೆ . 

 ಬರ್ಮಿಂಗ್‌ಹ್ಯಾಮ್‌ನ ( Birmingham ) ಹಯಾತ್ರಿಜೆನ್ಸಿ ಹೋಟೆಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಭಾಗವಹಿಸಿದ್ದ ಸಚಿವ ಬರ್ನ್ಸ್ , ಯುವಕನೊಬ್ಬನ ತೊಡೆ ಸವರಿ ಸಿಕ್ಕಿಬಿದ್ದಿದ್ದರು.  ಈ ಘಟನೆಯನ್ನು ಪ್ರತ್ಯಕ್ಷದರ್ಶಿಯೊಬ್ಬರು ಬಿಬಿಸಿ ನ್ಯೂಸ್ ಚಾನೆಲ್ ಗೆ ತಿಳಿಸಿದ್ದರು . ಅದನ್ನು ಆಧರಿಸಿ ಬಿಬಿಸಿ ವರದಿ ಪ್ರಕಟಿಸಿತ್ತು. ಇದು  ಬರ್ನ್ಸ್ ಸಚಿವ ಸ್ಥಾನಕ್ಕೆ ಕುತ್ತು ತಂದಿದೆ . 

ಸಂತ್ರಸ್ತ ಯುವಕ ತನ್ನ ಜತೆಗೆ ಬರ್ನ್ ಅವರು ದುರ್ನಡತೆ ತೋರಿದ್ದಾರೆ ಎಂದು ಸಭೆಯಲ್ಲಿದ್ದ ಪರಿಚಿತ ಸಂಸದರಿಗೆ ದೂರು ಕೊಟ್ಟಿದ್ದನು. . ಈ ಬಗ್ಗೆ ಪಕ್ಷವು ಆಂತರಿಕ ತನಿಖೆ ನಡೆಸಲಿದೆ ಎಂದು ಸಮಾಧಾನ ಮಾಡಲಾಗಿತ್ತು . ಜತೆಗೆ ದೂರನ್ನು ಗೌಪ್ಯವಾಗಿ ಇರಿಸಿಕೊಂಡು , ಸಂಸದ ಬರ್ನ್ಸ್ ಗಮನಕ್ಕೂ ಬರದಂತೆ ತನಿಖೆ ನಡೆಸಲಾಗಿತ್ತು.

50 ವರ್ಷದ ಬರ್ನ್ಸ್ ಅವರು ಬೋರಿಸ್ ಜಾನ್ಸನ್ ನೇತೃತ್ವದ ಸಂಪುಟದಲ್ಲಿ ಉತ್ತರ ಐರ್ಲೆಂಡ್ ಉಸ್ತುವಾರಿ ಸಚಿವರಾಗಿದ್ದರು . ಟ್ರಸ್ ಅವರ ಸಂಪುಟದಲ್ಲಿ ಅಂತಾರಾಷ್ಟ್ರೀಯ ವ್ಯಾಪಾರ ಖಾತೆಯ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿತ್ತು .

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99