ಬುರ್ಖಾ ( BURKHA) ಧರಿಸಿ ಓಡಾಟ , ಅರ್ಚಕ ಸೆರೆ
Tuesday, October 11, 2022
ತಿರುವನಂತಪುರ : ಬುರ್ಖಾ ಧರಿಸಿಕೊಂಡು ಸಂಚರಿಸುತ್ತಿದ್ದ ಅರ್ಚಕನನ್ನು ಕೇರಳದ ಕೊಯಿಲಾಂಡಿಯಲ್ಲಿ ಬಂಧಿಸಲಾಗಿದೆ .
ಕೇರಳದ ಮೆಪ್ಪಯೂರು ಸಮೀಪದ ದೇವಾಲಯದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದ ಜಿಷ್ಣು ನಂಬೂದರಿ ಬಂಧಿತ ವ್ಯಕ್ತಿ. ಈತ ಬುರ್ಖಾ ಧರಿಸಿಕೊಂಡು ಕೊಯಿಲಾಂಡಿ ಜಂಕ್ಷನ್ ಬಳಿ ಶಂಕಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದನು .
ಬುರ್ಖಾ ಧರಿಸಿ ಓಡಾಡುತ್ತಿದ್ದ ವೇಳೆ ಆಟೋ ಚಾಲಕನ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಬಳಿಕ ಆಟೋ ಡೈವರ್ ಅರ್ಚಕನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ . ಸಿಡುಬು ರೋಗ ಇದ್ದ ಕಾರಣ ಬುರ್ಖಾ ಧರಿಸಿ ಓಡಾಡುತ್ತಿದ್ದೆ ' ಎಂದು ಅರ್ಚಕ ಜಿಷ್ಣು ಪೊಲೀಸರ ವಿಚಾರಣೆಯಲ್ಲಿ ಹೇಳಿಕೊಂಡಿದ್ದಾನೆ . ಆದರೆ , ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಆತನಿಗೆ ಯವುದೇ ರೋಗ ಇರಲಿಲ್ಲ ಎಂದು ತಿಳಿದು ಬಂದಿದೆ .