Cinema : ರಿಷಭ್ ಶೆಟ್ಟಿ ಕಾಲಿಗೆ ಬಿದ್ದ ಯೂಟ್ಯೂಬರ್ ; ವಿಡಿಯೋ ಸಖತ್ ವೈರಲ್
Friday, October 14, 2022
ಕರಾವಳಿ ಮಣ್ಣಿನ ಸೊಗಡು ಇರುವ ಕಾಂತಾರ ಸಿನಿಮಾ ಕನ್ನಡದಲ್ಲಿ ಅದ್ಭುತ ಹಿಟ್ ಗಳಿಸಿ, ಸದ್ಯ ಹಿಂದಿ ಭಾಷೆಯಲ್ಲಿ ಡಬ್ ಆಗಿ ತೆರೆ ಕಂಡಿದೆ. ಹೀಗಾಗಿ ಚಿತ್ರತಂಡ ಹಿಂದಿ ಭಾಷೆಯ ಪ್ರಮೋಷನ್ ನಲ್ಲಿ ಬ್ಯುಸಿ ಆಗಿದೆ. ಕಾಂತಾರ ಹಿಂದಿ ಪ್ರಮೋಷನ್ ವೇಳೆ ಯೂಟ್ಯೂಬರ್ ಒಬ್ಬ ರಿಷಬ್ ಶೆಟ್ಟಿ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿದೆ.
ಹಿಂದಿಯ ಯೂಟ್ಯೂಬರ್ ಸೂರಜ್, ರಿಷಭ್ ಹಾಗೂ ಕಾಂತಾರ ಚಿತ್ರದ ನಾಯಕಿ ಸಪ್ತಮಿ ಗೌಡ ಅವರನ್ನು ಇಂಟರ್ವ್ಯೂ ಮಾಡುವ ಮೊದಲು, ರಿಷಭ್ ಅವರನ್ನು ಎದ್ದು ನಿಲ್ಲಿ ಅಂತ ಹೇಳ್ತಾರೆ. ಕಾಂತಾರವನ್ನ ತುಂಬಾನೆ ಮೆಚ್ಚಿದ ಹಿಂದಿನ ಈ ಯೂಟ್ಯೂಬ್, ರಿಷಭ್ ಅವರ ಕಾಲಿಗೆ ಬಿದ್ದು, ನಾನು ನನ್ನ ಗರ್ಲ್ ಫ್ರೆಂಡ್ ಗಿಂತ ಹೆಚ್ಚಾಗಿ ನಿಮ್ಮನ್ನ ಪ್ರೀತಿಸುತ್ತೇನೆ ಅಂತ ಹೇಳಿದ್ದಾರೆ.
ಈ ವೇಳೆ ಕೂಡಲೇ ರಿಷಬ್ ಶೆಟ್ಟಿ ಯೂಟ್ಯೂಬರ್‌ನನ್ನು ಮೇಲಕ್ಕೆ ಎತ್ತಿ ತಬ್ಬಿ ಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ