UDUPI : ಲಾರಿ -ಬೈಕ್ ನಡುವೆ ಅಪಘಾತ: ಬೈಕ್ ಸವಾರ ಸಾವು
Monday, October 10, 2022
ಲಾರಿ ಚಾಸಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉಡುಪಿ ನಗರ ಸಮೀಪದ ಉದ್ಯಾವರ ಸೇತುವೆ ಬಳಿ ನಡೆದಿದೆ. ಕಟಪಾಡಿಯ ಮೂಡಬೆಟ್ಟುವಿನ ಮಹಮ್ಮದ್ ರಫೀಕ್ ಬಾವಾ ಮೃತ ಬೈಕ್ ಸವಾರ.
ಪಲ್ಸರ್ ಬೈಕಿಗೆ ಲಾರಿ ಚಾಸೀಸ್ ತಾಗಿದ ಪರಿಣಾಮ ಅಪಘಾತ ಸಂಭವಿಸಿ, ಮಹಮ್ಮದ್ ರಫೀಕ್ ಬಾವಾ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.