Bigg boss : ತುಟಿ ನೋಡಿ ಭವಿಷ್ಯ ಹೇಳ್ತಾರೆ ಗುರು..!
Friday, October 7, 2022
ನಂಬರ್ ಮೂಲಕ ಜ್ಯೋತಿಷ್ಯ ಹೇಳಿ ಸಖತ್ ಸುದ್ದಿಯಲ್ಲಿದ್ದ, ಆರ್ಯವರ್ಧನ್ ಗುರೂಜಿ ಸದ್ಯ ಬಿಗ್ ಬಾಸ್ ಮನೆಯಲ್ಲಿ ತುಟಿ ನೋಡಿ ಭವಿಷ್ಯ ಹೇಳಿದ್ದು, ಜನ ಹೀಗೂ ಭವಿಷ್ಯ ನುಡಿತಾರಾ ಗುರು ಅಂತ ಮಾತಾಡಿಕೊಳ್ಳುತ್ತಿದ್ದಾರೆ..
ಬಿಗ್ ಬಾಸ್ ಮನೆಯಲ್ಲಿ ಬೇರೆ ಬೇರೆ ಟಾಸ್ಕ್ ಗಳನ್ನು ನೀಡಲಾಗುತ್ತಿದ್ದು ಈ ವೇಳೆ ಗುರೂಜಿ ಅಮೂಲ್ಯ ಅವರ ತುಟಿ ನೋಡಿ ಭವಿಷ್ಯ ನುಡಿದಿದ್ದಾರೆ. "ನಿಮ್ ತುಟಿ ಮೇಲೆ ಚೂಪಾಗಿದೆ. ಹೀಗಿದ್ದರೆ ಒಳ್ಳೆಯದು ಎಲ್ಲರೂ ನಿಮ್ಮನ್ನು ಇಷ್ಟಪಡುತ್ತಾರೆ ಅಂತ ಆರ್ಯವರ್ಧನ್ ಗುರೂಜಿ ಹೇಳಿದ್ದು, ಗುರೂಜಿ ಮಾತಿಗೆ ಅಮೂಲ್ಯ ನಕ್ಕಿದ್ದಾರೆ. ಈ ವೇಳೆ ಅಲ್ಲೇ ಇದ್ದ ರಾಕೇಶ್ ಅಡಿಗ, ನನ್ನ ತುಟಿ ಭವಿಷ್ಯ ಹೇಳಿ ಅಂದಾಗ, ನಿನ್ನ ಹಿಂದೆ ಯಾರು ಬೀಳಲ್ಲ, ನೀನೇ ಎಲ್ಲರ ಹಿಂದೆ ಹೋಗುತ್ತಿಯಾ ಟಾಂಗ್ ಕಾಳೆಲೆದಿದ್ದಾರೆ.