ಖ್ಯಾತ ಮಲಯಾಳಂ ನಟಿ ಅನ್ನಾ ರಾಜನ್ ಅವರು ಸಿಮ್ ಖರೀದಿಸಲು ಶೋ ರೂಂ ಗೆ ತೆರಳಿದ ವೇಳೆ ಉದ್ಯೋಗಿಯೊಬ್ಬರು ಕೂಡಿ ಹಾಕಿದ ಘಟನೆ ಕೇರಳದಲ್ಲಿ ನಡೆದಿದೆ.
ಅಲುವಾದಲ್ಲಿರುವ ಖಾಸಗಿ ಟೆಲಿಕಾಂ ಶೋ ರೂಮ್ ಗೆ ಅನ್ನಾ ರಾಜನ್ (Anna Rajan ) ಅವರು DUPLICATE ಸಿಮ್ ಖರೀದಿಸಲು ತೆರಳಿದಾಗ ಈ ಘಟನೆ ನಡೆದಿದೆ. ಈ ಘಟನೆ ಬಗ್ಗೆ ನಟಿ ದೂರು ದಾಖಲಿಸಿದ್ದಾರೆ.
Duplicate ಸಿಮ್ ಖರೀದಿಸಲು ಶೋ ರೂಮ್ ಗೆ ಹೋಗಿದ್ದ ವೇಳೆ ಅಲ್ಲಿನ ಉದ್ಯೋಗಿಯೊಬ್ಬರು ನನ್ನ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಅಲ್ಲದೆ ಅವರು ಶೋ ರೂಮ್ ನ ಶಟರ್ ನ್ನು ಎಳೆದು ನನ್ನನ್ನು ಕೂಡಿ ಹಾಕಿದರು. ಇದನ್ನು ನಾನು ಪ್ರಶ್ನಿಸಿದಾಗ ಬೆದರಿಕೆಯೊಡ್ಡಿದ್ದರು ಎಂದು ಅನ್ನಾ ರಾಜನ್ ಹೇಳಿದ್ದಾರೆ.
ಅನ್ನಾ ರಾಜನ್ ಅವರು ನೀಡಿದ ದೂರಿನ ಬಳಿಕ ಅಲುವಾ ಪೊಲೀಸ್ ಠಾಣೆಗೆ ಟೆಲಿಕಾಂ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದ್ದು, ಈ ವೇಳೆ ಆತ ಕ್ಷಮೆಯಾಚಿಸಿದ್ದಾನೆ. ಆತನ ಭವಿಷ್ಯವನ್ನು ಗಮನದಲ್ಲಿರಿಸಿ ಈ ಪ್ರಕರಣವನ್ನು ಕೈ ಬಿಟ್ಟಿದ್ದೇನೆ ಎಂದು ಅನ್ನಾ ರಾಜನ್ ತಿಳಿಸಿದ್ದಾರೆ.
ಮಲಯಾಳಂ ನ ಸೂಪರ್ ಡೂಪರ್ ಹಿಟ್ ಸಿನಿಮಾ ಅಂಗಮಾಲಿ ಡೈರೀಸ್ ( angamali dairies) ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅನ್ನಾ ರಾಜನ್, ಆ ಬಳಿಕ ಮೋಹನ್ ಲಾಲ್ ಅಭಿನಯದ ವೆಲ್ಲಿಪಡತ್ತಿಂಡೆ ಪುಸ್ತಕಂ, ಮಮ್ಮುಟಿಯ ನಟಿಸಿದ ಮಧುರ ರಾಜ, ಅಯ್ಯಪ್ಪನುಂ ಕೊಶಿಯುಂ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಇಡುಕ್ಕಿ ಬ್ಲಾಸ್ಟರ್ಸ್ ಹಾಗೂ ತಲನಾರಿಝಾ ಚಿತ್ರಗಳಲ್ಲಿ ಅನ್ನಾ ರಾಜನ್ ನಟನೆ ಮಾಡುತ್ತಿದ್ದಾರೆ.