-->

ಪಿಲಿಕುಳದಲ್ಲಿ BANDED LASER ಹಾವಿಗೆ ಇರುವೆ ಕಾಟ- ವಿಡಿಯೋ ವೈರಲ್

ಪಿಲಿಕುಳದಲ್ಲಿ BANDED LASER ಹಾವಿಗೆ ಇರುವೆ ಕಾಟ- ವಿಡಿಯೋ ವೈರಲ್

 

ಮಂಗಳೂರು: ನಗರದ ಪಿಲಿಕುಳ‌ ಜೈವಿಕ ಉದ್ಯಾನವನದಲ್ಲಿ BANDED LASER ಎಂಬ ಹಾವಿಗೆ ಇರುವೆಗಳ ಹಿಂಡು ಕಾಟ ಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


 ಪಿಲಿಕುಳ ಜೈವಿಕ ಉದ್ಯಾನವನದಲ್ಲಿರುವ ಉರಗಾಲಯದಲ್ಲಿದ್ದ  ಪಟ್ಟೆ ಶೀಘ್ರಗಾಮಿ ಹಾವು ( Banded laser snake) ಗೆ, ಇರುವೆಗಳ ಹಿಂಡು ದಾಳಿ ನಡೆಸಿದೆ. ಇರುವೆಗಳ ಕಾಟದಿಂದ ಮುಕ್ತವಾಗಲು ಹಾವು ಒದ್ದಾಡುತ್ತಿರುವ ದೃಶ್ಯವನ್ನು ಪ್ರವಾಸಿಗರು ವಿಡಿಯೋ ಮಾಡಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಈ ಬಗ್ಗೆ ಪ್ರತಿಕ್ರೀಯಿಸಿರುವ ಪಿಲಿಕುಳ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ಅವರು ಮಳೆಗಾಲ ಮುಗಿಯುವ ಸಂದರ್ಭದಲ್ಲಿ ಇರುವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಪ್ರವಾಸಿಗರು ಹಾವಿನ ಕೋಣೆಗೆ ಕೂಲ್ ಡ್ರಿಂಕ್ಸ್ ನ್ನು ಚೆಲ್ಲಿದ್ದು ಇದರಿಂದ ಇರುವೆಗಳು ಮುತ್ತಿಕೊಂಡಿದೆ. ಇದು ತಿಳಿದ ಕೂಡಲೇ ಹಾವಿನ ಕೋಣೆಯನ್ನು ಶುಚಿಗೊಳಿಸಲಾಗಿದೆ. ಹಾವಿಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99