ಮಂಗಳೂರಿನ ವಿವಿಧೆಡೆ ಇಂದು ( ಅಕ್ಟೋಬರ್ 7) ವಿದ್ಯುತ್ ಕಡಿತ- ಎಲ್ಲೆಲ್ಲಿ? ಇಲ್ಲಿ ಓದಿ
Friday, October 7, 2022
ಮಂಗಳೂರು:-110/33/11ಕೆವಿ ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆವಿ ಎಕ್ಕೂರು ಮತ್ತು 11ಕೆವಿ ಪಂಪ್‍ವೆಲ್ ಫೀಡರ್‍ಗಳಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಯೋಜನೆಯಲ್ಲಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾಮಗಾರಿ ಹಮ್ಮಿಕೊಂಡ ಕಾರಣ ನಗರದ ವಿವಿಧೆಡೆ ಇಂದು ವಿದ್ಯುತ್ ವ್ಯತ್ಯಯವಾಗಲಿದೆ.
ಅ.7ರಂದು ಬೆಳಿಗ್ಗೆ 10 ರಿಂದ ಸಂಜೆ 5:30ರ ವರೆಗೆ ಉಜ್ಜೋಡಿ, ನೆಕ್ಕರೆಮಾರ್, ಗೋರಿಗುಡ್ಡ, ಎಕ್ಕೂರು, ನೇತ್ರಾವತಿ ಗ್ಯಾರೇಜ್, ಕಡೆಕಾರ್, ಜಪ್ಪಿನಮೊಗರು, ತಾರೆದೊಲ್ಯ, ತಂದೊಳಿಗೆ, ಡೆನ್ಮಾರ್ಕ ಲೇಔಟ್, ವಾಸುಕೀನಗರ, ಅಳಪೆ ಮಠ, ಕನಕರ ಬೆಟ್ಟು, ರಾಂತೋಟ, ಕುಕ್ಕಾಡಿ ತೋಟ, ಪರಂಜ್ಯೋತಿ ಭಜನಾ ಮಂದಿರ, ಕುಡುಪಾಡಿ ತೋಟ, ಸದಾಶಿವನಗರ, ಪಡೀಲ್ ಜಂಕ್ಷನ್, ಕಂಕನಾಡಿ ರೈಲ್ವೇ ಸ್ಟೇಷನ್, ನಾಗುರಿ, ಗರೋಡಿ, ಕಪಿತಾನಿಯೋ, ಬಲಿಪಮಾಲ್, ಮಹಾಲಿಂಗೇಶ್ವರ ಟೆಂಪಲ್, ನೇತ್ರಾವತಿ ಲೇಔಟ್, ಪಂಪ್‍ವೆಲ್, ಪ್ರಶಾಂತ್ ಭಾಗ್, ಸೈಮನ್ ಲೇನ್, ಗ್ಯಾಸ್ ಗೋಡೌನ್, ಮೇಘನಗರ, ಗುಡ್ಡೆತೋಟ, ರೆಡ್ ಬಿಲ್ಡಿಂಗ್, ಕೆಂಬಾರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.