ದ.ಕ ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ WHATSAPP ಸೃಷ್ಟಿ
Wednesday, September 14, 2022
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಅವರ ಹೆಸರಿನಲ್ಲಿ ಖದೀಮರು ನಕಲಿ ವಾಟ್ಸಪ್ ಖಾತೆಯನ್ನು ಸೃಷ್ಟಿಸಿದ್ದಾರೆ. 8590710748 ನಂಬರ್ ನಿಂದ ದ.ಕ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಅವರ ಹೆಸರನ್ನು ಮತ್ತು ಪೊಟೋವನ್ನು ಬಳಸಿ ವಾಟ್ಸಪ್ ಖಾತೆ ಸೃಷ್ಟಿ ಮಾಡಲಾಗಿದೆ.
ವಾಟ್ಸಪ್ ಮುಖಾಂತರ ಮೆಸೆಜ್ ಕಳುಹಿಸಿ ಅಪರಿಚಿತರು ಸಹಾಯ ಅಥವಾ ಹಣವನ್ನು ವರ್ಗಾಯಿಸಲು ಕೇಳಬಹುದು. ಈ ನಂಬರ್ ನನ್ನದಾಗಿರುವುದಿಲ್ಲ ಆದ ಕಾರಣ ನೀವು ಯಾವುದೇ ರೀತಿಯಲ್ಲಿ ಇವರಿಗೆ ಸಹಾಯವನ್ನು ಅಥವಾ ಹಣವನ್ನು ವರ್ಗಾಯಿಸ ಬೇಡಿ. ಆ ನಂಬರ್ WhatsApp ನಲ್ಲಿ ರಿಪೋರ್ಟ್ ಮಾಡಿ block ಮಾಡಿ ಎಂದು ದ.ಕ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಅವರು ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ