UDUPI : ನೀರಿನಲ್ಲಿ ಮುಳುಗಿ ಯುವಕ ಸಾವು
Thursday, September 15, 2022
ಹೊಳೆಯಲ್ಲಿ ಸ್ನೇಹಿತರ ಜೊತೆ ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವನ್ಪಿದ ಘಟನೆ ಉಡುಪಿಯ ಹೆಬ್ರಿ ತಾಲೂಕಿನ ವರಂಗ ಗ್ರಾಮದ ತಲಮನೆ ಎಂಬಲ್ಲಿ ನಡೆದಿದೆ.
ಮುನಿಯಾಲು ಪವನ್ ಆಚಾರ್ಯ(27) ಸಾವನ್ಪಿದ ಯುವಕ.
ಪವನ್ ಮುದ್ರಾಡಿಯಲ್ಲಿ ಸ್ವಂತ ಅಂಗಡಿಯಲ್ಲಿ ಚಿನ್ನ ಹಾಗೂ ಬೆಳ್ಳಿ ಆಭರಣಗಳ ಕುಸುರಿ ಕೆಲಸ ಮಾಡಿಕೊಂಡಿದ್ದು, ಬುಧವಾರ ಸಂಜೆ ವೇಳೆ ಸ್ನೇಹಿತರ ಜೊತೆ, ತಲಮನೆ ಎಂಬಲ್ಲಿ ಹೊಳೆಯಲ್ಲಿ ಈಜಲು ತೆರಳಿದ್ದ. ಹೊಳೆಯಲ್ಲಿ ಸ್ನೇಹಿತರೊಂದಿಗೆ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಎಕಿ ನಾಪತ್ತೆಯಾದ ಪವನ್‌ಗಾಗಿ ಸ್ನೇಹಿತರು ಹುಡುಕಾಡಿದಾಗ ಅವರ ಶವವು ಅನತಿದೂರದಲ್ಲಿ ನೀರಿನಲ್ಲಿ ಮುಳುಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.ವಹೆಬ್ರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.