ಮಗಳು ಜಾನಕಿ ಖ್ಯಾತಿಯ ಮಂಡ್ಯ ರವಿ ಇನ್ನಿಲ್ಲ
Wednesday, September 14, 2022
ಮಗಳು ಜಾನಕಿ ಧಾರವಾಹಿ ಖ್ಯಾತಿ ಯ ಮಂಡ್ಯ ರವಿ ಇಂದು ನಿಧನರಾಗಿದ್ದಾರೆ . ಕನ್ನಡ ಕಿರುತೆರೆಯಲ್ಲಿ ಖ್ಯಾತ ಕಲಾವಿದರಾಗಿರುವ ಮಂಡ್ಯ ರವಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ರವಿ ಅವರು ಕೊನೆಯುಸಿರೆಳೆದರು. ರವಿ ನಿಧನಕ್ಕೆ ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ಅಧ್ಯಕ್ಷರಾದ ಎಸ್.ವಿ. ಶಿವಕುಮಾರ್, ಕಿರುತೆರೆ ಧಾರಾವಾಹಿ ನಿರ್ದೇಶಕ ಟಿ ಎನ್ ಸೀತಾರಾಮ ಸೇರಿದಂತೆ ಟೆಲಿವಿಷನ್ ಉದ್ಯಮದ ಅನೇಕ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.
ರವಿ ಪ್ರಸಾದ್ ಎಂ. ಎಂಬ ಪೂರ್ಣ ಹೆಸರು ಹೊಂದಿದ ಮಂಡ್ಯ ರವಿ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸುತ್ತಲೇ ಪ್ರಸಿದ್ಧ ಆದವರು. ರವಿ ಅವರು ಬಾಲ್ಯದಿಂದಲೇ ನಾಟಕಗಳಲ್ಲಿ ಅಭಿನಯಿಸುತ್ತಾ, ನಂತರ ಬಣ್ಣದ ಲೋಕದತ್ತ ಒಲವು ಬೆಳೆಸಿಕೊಂಡರು. ಎಂಎ ಇಂಗ್ಲಿಷ್ ಮತ್ತು ಎಲ್‍ಎಲ್‍ಬಿ ಓದಿದ ಇವರು ಆಯ್ಕೆ ಮಾಡಿಕೊಂಡದ್ದು ನಟನೆ. 1996ರಲ್ಲಿ ಜನದನಿ ಹವ್ಯಾಸಿ ನಾಟಕ ತಂಡ ಸೇರಿ, ಅಲ್ಲಿಂದ ಟಿ.ಎಸ್. ನಾಗಾಭರಣ ನಿರ್ದೇಶನದ ‘ಮಹಾಮಾಯಿ’ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆ ಜಗತ್ತಿಗೆ ಕಾಲಿಟ್ಟ ಇವರು ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದರು, ಮಿಂಚು, ಮುಕ್ತಮುಕ್ತ, ಚಿತ್ರಲೇಖ, ಯಶೋಧೆ, ವರಲಕ್ಷ್ಮಿ ಮೊದಲಾದ ಧಾರವಾಹಿ ಗಳಲ್ಲಿ ನಟಿಸಿದ್ದಾರೆ.
ಮಗಳು ಜಾನಕಿ ಧಾರಾವಾಹಿಯ ಚಂದು ಭಾರ್ಗಿ ಪಾತ್ರದಲ್ಲಿ ನಟಿಸಿದ್ದರು