UDUPI : ಮರ ಕಡಿಯುತ್ತಿದ್ದ ಯುವಕನ ಮೈ ಮೇಲೆ ಮರ ಬಿದ್ದು ಸಾವು
Wednesday, September 14, 2022
ಮರ ಕಡಿಯುತ್ತಿದ್ದ ಯುವಕನ ಮೈಮೇಲೆ ಮರ ಬಿದ್ದು ಸಾವನ್ಪಿದ ಘಟನೆ ಉಡುಪಿ ನಗರ ಕಲ್ಸಂಕ ಬಳಿ ನಡೆದಿದೆ.
ಬಾಗಲಕೋಟೆ ಮೂಲದ, ಉಡುಪಿ ಬೀಡಿನಗುಡ್ಡೆ ನೆಲೆಸಿರುವ ಸುರೇಶ ಸಂದಿಮನಿ (32) ಎಂಬವರು ಆ ಮೃತ ವ್ಯಕ್ತಿ.
ಕಲ್ಸಂಕ ಬಳಿ ಮನೆಯೊಂದರ ಹಿಂಭಾಗದಲ್ಲಿರುವ ಜಾಗದಲ್ಲಿ ಬೆಳೆದಿರುವ ಮರಗಳನ್ನು ಕಡಿಯುತ್ತಿದ್ದಾಗ, ಮರವು ತುಂಡಾಗಿ ಮೈಮೇಲೆ ಬಿದ್ದು, ಹೊಟ್ಟೆಗೆ ಸೊಂಟಕ್ಕೆ ಹಾಗೂ ಕಾಲುಗಳಿಗೆ ತೀವ್ರ ಗಾಯವಾಗಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಸುರೇಶ ಮೃತಪಟ್ಟಿರುತ್ತಾರೆ. ಯಾವುದೇ ಸುರಕ್ಷಾ ನೀಡದೇ ನಿರ್ಲಕ್ಷ ವಹಿಸಿ ಮರ ಕಡಿಸಿದ್ದು ಘಟನೆಗೆ ಕಾರಣ ಎನ್ನಲಾಗಿದ್ದು, ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.