
ಇವರೆಂತಾ ಮನುಷ್ಯರು! ಆತ್ಮಹತ್ಯೆ ಮಾಡುತ್ತಿದ್ದ ಯುವಕನನ್ನು ತಡೆಯದೇ video ಮಾಡಿದ್ರು
ವಿಜಯನಗರ: ನೇಣು ಬಿಗಿದು ಆತ್ಮಹತ್ಯೆ ಮಾಡುತ್ತಿದ್ದ ವ್ಯಕ್ತಿಯನ್ನು ತಡೆಯದೇ ಕೆಲವರು ವೀಡಿಯೋ ಮಾಡಿದ ಘಟನೆ ಹನುಮನಹಳ್ಳಿಯಲ್ಲಿ ನಡೆದಿದೆ.
ಹನುಮನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿನ ಫ್ಲೈಓವರ್ ಮೇಲಿರುವ ವಿದ್ಯುತ್ ಕಂಬಕ್ಕೆ ನೇಣು ಬಿಗಿದುಕೊಂಡು 25 ವರ್ಷದ ಮಂಜುನಾಥ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಜುನಾಥ್ ನೇಣು ಹಾಕಿಕೊಳ್ಳುವುದನ್ನು ನೋಡಿದ ಕೆಲವರು ಆತನನ್ನು ತಡೆಯದೇ ವೀಡಿಯೋ ಮಾಡಿದ್ದಾರೆ.
ಜೀವನದಲ್ಲಿ ಜಿಗುಪ್ಸೆಗೊಂಡು ಮಂಜುನಾಥ್, ತಾನು ಉಟ್ಟಿದ್ದ ಲುಂಗಿಯಿಂದ ವಿದ್ಯುತ್ ಕಂಬಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.
ವಿಡಿಯೋ ಮಾಡುತ್ತಿರುವವರು ಆತ ಕುಡಿದು ಹೀಗೆ ಮಾಡಿಕೊಳ್ಳುತ್ತಿದ್ದಾನೆ ಎಂದು ಮಾತನಾಡಿಕೊಳ್ಳುವುದು ವಿಡಿಯೋದಲ್ಲಿ ಸೆರೆಯಾಗಿದೆ.