
UDUPI ; ಖಾಸಗಿ ಬಸ್ - ಪಿಕಪ್ ಮುಖಾಮುಖಿ ಢಿಕ್ಕಿ : ಪಿಕಪ್ ಚಾಲಕ ಸಾವು
Tuesday, September 13, 2022
ಖಾಸಗಿ ಬಸ್ ಹಾಗೂ ಪಿಕಪ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಪಿಕಪ್ ಚಾಲಕ ಸಾವಿಗೀಡಾದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹಿರ್ಗಾನದ ದುಗ್ಗನರಾಯ ಚಡವು ಎಂಬಲ್ಲಿ ನಡೆದಿದೆ.
ನೆಲ್ಲಿಕಟ್ಟೆ ನಿವಾಸಿ ಸಂತೋಷ್ ನಾಯಕ್ ಸಾವನ್ಪಿದ ಪಿಕಪ್ ಚಾಲಕ. ಹೆಬ್ರಿಯಿಂದ ಕಡೆಯಿಂದ ಬೆಂಗಳೂರಿಗೆ ಹೋಗುತಿದ್ದ ಖಾಸಗಿ ಬಸ್ , ಹಿರ್ಗಾನದಿಂದ ನೆಲ್ಲಿಕಟ್ಟೆ ಕಡೆಗೆ ಬರುತಿದ್ದ ಪಿಕಪ್‌ಗೆ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಪಿಕಪ್ ಚಾಲಕ ಸಂತೋಷ್ ನಾಯಕ್
ಸಾವನ್ಪಿದ್ದಾನೆ. ಬಸ್ ಚಾಲಕ ವೇಗವಾಗಿ ಚಾಲನೆಯೇ ಅವಘಡ ಕ್ಕೆ ಕಾರಣ ಎನ್ನಲಾಗಿದ್ದು, ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.