UDUPI : ವಿದ್ಯುತ್ ಕಂಬ ಹೊತ್ತೊಯ್ಯುತ್ತಿದ್ದಾಗ ಗುದ್ದಿದ ಕಾರು, ನಾಲ್ವರಿಗೆ ಗಂಭೀರ ಗಾಯ
Tuesday, September 13, 2022
ಟ್ರಾನ್ಸ್‌ಫೋರ್ಮರ್ ಅಳವಡಿಸಲು ಮೆಸ್ಕಾಂ ಗುತ್ತಿಗೆ ಕಾರ್ಮಿಕರು, ಕಂಬ ಹೊತ್ತೊಯ್ಯುತ್ತಿದ್ದಾಗ, ವೇಗವಾಗಿ ಬಂದ ಕಾರೊಂದು ಗುದ್ದಿ ನಾಲ್ವರು ಕಾರ್ಮಿಕರು ಗಾಯಗೊಂಡ ಉಡುಪಿ ಜಿಲ್ಲೆಯ ಕಾಪು ಶಿರ್ವ ನ್ಯಾರ್ಮ ಸೇತುವೆಯ ಬಳಿ ನಡೆದಿದೆ.
ರಸ್ತೆ ಬಂದ್ ಮಾಡಿ, ಕಾರ್ಮಿಕರು ವಾಹನದಿಂದ ಕಂಬವನ್ನು ಇಳಿಸಿ ಕಂಬ ಹೊತ್ತೊಯ್ಯುತ್ತಿದ್ದ ವೇಳೆ ನೇರವಾಗಿ ಬಂದ ಕಾರೊಂದು, ಮೆಸ್ಕಾಂ ಸಿಬಂದಿ ಕಾರು ನಿಲ್ಲಿಸಲು ಸೂಚನೆ ನೀಡಿದರೂ ಕಾರು ಚಾಲಕ ನಿಲ್ಲಿಸದೇ ಮುನ್ನುಗ್ಗಿದ್ದು, ಈ ವೇಳೆ ಕಾರು ಕಂಬಕ್ಕೆ ಢಿಕ್ಕಿ ಹೊಡೆದು ನಾಲ್ವರು ಕಾರ್ಮಿಕರು ಗಾಯಗೊಂಡಿದ್ದಾರೆ. ವಿದ್ಯುತ್ ಕಂಬ ಕಾರಿನ ಮೇಲೆ ಬಿದ್ದುದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ವಿದ್ಯುತ್ ಕಂಬ ಕಾರಿನ ಮೇಲೆ ಬಿದ್ದು ಕಾರು ಜಖಂ ಗೊಂಡಿದ್ದು, ಗಾಯಕೊಂಡ ಮೆಸ್ಕಾಂ ಸಿಬ್ಬಂದಿಯನ್ನು ಶಿರ್ವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಈ ಘಟನೆಯಿಂದ ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ಉಂಟಾಯಿತು.