ಪ್ರವೀಣ್ ನೆಟ್ಟಾರು 'ಆ' ಕನಸು ನನಸು ಮಾಡಲಿದ್ದಾರೆ ನಳಿನ್ ಕುಮಾರ್ ಕಟೀಲ್
Tuesday, September 13, 2022
ಮಂಗಳೂರು: ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಕನಸೊಂದನ್ನು ನನಸು ಮಾಡಲು ನಳಿನ್ ಕುಮಾರ್ ಕಟೀಲ್ ಮುಂದಾಗಿದ್ದಾರೆ.
ಪ್ರವೀಣ್ ಅವರ ಪುಟ್ಟ ಮನೆಯ ಕನಸನ್ನು ನನಸು ಮಾಡುವುದಾಗಿ ನಳಿನ್ ಕುಮಾರ್ ಕಟೀಲ್ ಕುಟುಂಬಕ್ಕೆ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕುಂಜಾಡಿಯಲ್ಲಿರುವ ನಳಿನ್ ಕುಮಾರ್ ಕಟೀಲ್ ಮನೆಗೆ ಭೇಟಿ ನೀಡಿದ ಪ್ರವೀಣ್ ಕುಟುಂಬಸ್ಥರಿಗೆ
ಕುಮಾರ್ ಕಟೀಲ್ ಅವರ ಸ್ವಗೃಹ ಕುಂಜಾಡಿಯಲ್ಲಿ ಪ್ರವೀಣ್ ಕುಟುಂಬಸ್ಥರು ನಳಿನ್ ಕುಮಾರ್ ಕಟೀಲ್‌ರನ್ನು ಭೇಟಿಯಾಗಿದ್ದು, ಈ ವೇಳೆ ಪ್ರವೀಣ್ ಆಸೆಯಂತೆ ಸುಂದರವಾದ ಮನೆಯನ್ನು ನಿರ್ಮಿಸಿ ಕೊಡುವುದಾಗಿ ನಳಿನ್ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರವೀಣ್ ಕುಟುಂಬದ ಸದಸ್ಯರಿಗೆ ಮುಖ್ಯಮಂತ್ರಿ ಕಚೇರಿಯಲ್ಲೇ ಸರಕಾರಿ ಕೆಲಸ ನೀಡುವುದಾಗಿ ಭರವಸೆ ನೀಡಿದ್ದರು.