
UDUPI : ತಾಯಿ ಮಡಿಲಲ್ಲೇ ಭಾಷಣ ಮಾಡಿ ಪ್ರಥಮ ಸ್ಥಾನ ಗೆದ್ದ ಬಾಲಕಿ..! ಅಂಗ ನ್ಯೂನ ವಿದ್ಯಾರ್ಥಿನಿ ಅದ್ಭುತ ಭಾಷಣ ನೀವು ಕೇಳಿ
Saturday, September 24, 2022
ಸಾಧನೆ ಮಾಡಬೇಕು ಅಂತ ಛಲ ತೊಟ್ರೆ ಅಂಗ ನ್ಯೂನತೆ ಅಡ್ಡಿಯಲ್ಲ ಅಂತ ಅನೇಕ ಸಲ ಸಾಬೀತು ಆಗಿದೆ. ಅದರಂತೆ ತಾಯಿಯ ಮಡಿಲಲ್ಲ ಕೂತು ಭಾಷಣ ಮಾಡಿ, ಪ್ರಥಮ ಸ್ಥಾನ ಗಳಿಸಿದ ಬಾಲಕಿಯ ಸಾಧನೆಯನ್ನು ಕರಾವಳಿಯ ಜನ ಕೊಂಡಾಡುತ್ತಿದ್ದಾರೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ, ನಾಡ ಗ್ರಾಮದ ಶ್ರೀಧರ್ ಹಾಗೂ ಗೀತಾ ದಂಪತಿ ಪುತ್ರಿ ಶ್ರೀರಕ್ಷಾ, ಹುಟ್ಟುವಾಗಲೇ ಎರಡು ಕಾಲಿನ ಸ್ವಾಧೀನವನ್ನು ಕಳೆದುಕೊಂಡಿದ್ದಳು. ಕಾಲಿನ ಸ್ವಾಧೀನ ಇಲ್ಲದೇ ಇದ್ರೂ, ಓದಿನಲ್ಲಿ ವಿಶೇಷ ಆಸಕ್ತಿ. ನಾಡಾ ಗ್ರಾಮದ ಕಡ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿಯಲ್ಲಿ ಕಲಿಯುತ್ತಿರುವ ಶ್ರೀರಕ್ಷಾ ತರಗತಿಗೆ ಮೊದಲ ಸ್ಥಾನ. ರಕ್ಷಾ ತಾಯಿ ಮನೆಯಿಂದ, 5 ಕೀ.ಮೀ ವರೆಗೆ ತನ್ನ ಮಡಿಲಲ್ಲಿ ಕೂರಿಸಿಕೊಂಡು ಶಾಲೆಗೆ ಕರೆದುಕೊಂಡು ಬರುತ್ತಿದ್ದರು.
ಇದನ್ನು ಗಮನಿಸಿದ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕ ವೃಂದದವರು, ದಿನಾಲೂ ರಿಕ್ಷಾದಲ್ಲಿ ಆಕೆಯನ್ನು ಕರೆತರುವ ವ್ಯವಸ್ಥೆ ಮಾಡಿದ್ದಾರೆ. ಸಹಪಾಠಿಗಳೇ ಶಾಲೆಯಲ್ಲಿ ಈಕೆಗೆ ನೆರವಾಗುತ್ತಾರೆ. ಕ್ವಿಜ್, ಭಾಷಣ, ಹಾಡು ಹೀಗೆ ಶ್ರೀರಕ್ಷಾ ಎಲ್ಲದರಲ್ಲೂ ಮುಂದು. ಇತ್ತೀಚೆಗೆ ನಡೆದ ಕಸ್ಟರ್ ಮಟ್ಟದಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ ತಾಯಿಯ ಮಡಿಲಲ್ಲೇ ಕೂತು ಪ್ರಥಮ ಸ್ಥಾನ ಪಡೆದು, ಮುಂದಿನ ಹಂತಕ್ಕೆ ಆಖ್ಕೆಯಾಗಿದ್ದಾಳೆ. ಅಂಗ ನ್ಯೂನತೆ ಮೆಟ್ಟಿ ನಿಂತ ಈಕೆಯ ಸಾಧನೆ ಇತರರಿಗೂ ಸ್ಫೂರ್ತಿ..
ವಿಡಿಯೋ ನೋಡಿ