
UDUPI : ತ್ಯಾಜ್ಯ ನಿರ್ವಹಣಾ ಸಿಬ್ಬಂದಿಯಾಗಿ ದುಡಿದ IAS ಅಧಿಕಾರಿ..! ಯಾಕೆ ಗೊತ್ತಾ..?
ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪ್ರಸನ್ನ ಅವರು ನಗರದ, ಬಡಗಬೆಟ್ಟು ತ್ಯಾಜ್ಯ ಸಂಗ್ರಹಣಾ ಕೇಂದ್ರಕ್ಕೆ ಅನಿರೀಕ್ಷಿತ ಭೇಟಿ ನೀಡಿ, ತಾವೇ ಸ್ವತಃ ತಾಜ್ಯ ನಿರ್ವಹಣಾ ವಾಹನ ಚಾಲನೆ ಮಾಡಿ ಅಚ್ಚರಿ ಮೂಡಿಸಿದ್ದಾರೆ. ತ್ಯಾಜ್ಯ ನಿರ್ವಹಣೆ ಅನ್ನೋದು ಕೂಡ ಒಳ್ಳೆಯ ಕೆಲಸ, ಕೆಲಸ ಬಗ್ಗೆ ಕೀಲರಿಮೆ ಬೇಡ ಅಂತ ತೋರಿಸಿಕೊಟ್ಟಿದ್ದಾರೆ IAS ಅಧಿಕಾರಿ.
ಬಡಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆ ಮನೆಗೆ, ತ್ಯಾಜ್ಯ ನಿರ್ವಹಣಾ ವಾಹನವನ್ನು ಚಾಲನೆ ಮಾಡಿಕೊಂಡು ಹೋಗಿ, ತ್ಯಾಜ್ಯ ಸಂಗ್ರಹಣೆಯಲ್ಲಿ ಭಾಗಿಯಾಗಿದ್ದರು. ತ್ಯಾಜ್ಯ ನಿರ್ವಹಣಾ ಸಿಬ್ಬಂದಿಗೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಈ ಕೆಲಸದಿಂದ ಹೊಸ ಉತ್ಸಾಹ ಮೂಡಿಸಿದ್ದು ಮಾತ್ರವಲ್ಲದೇ, IAS ಅಧಿಕಾರಿಯೊಬ್ಬರ ಈ ನಡೆ ಜಿಲ್ಲೆಯ ಇಡೀ ತ್ಯಾಜ್ಯ ನಿರ್ವಹಣಾ ಕಾರ್ಯಕರ್ತರಿಗೆ ಸ್ಫೂರ್ತಿ ತಂದಿದೆ.