
UDUPI ; ಕೊಟ್ಟಿಗೆಯಲ್ಲಿ ಅವಿತ್ತಿದ್ದ ಹತ್ತಡಿಯ ಕಾಳಿಂಗ
ಮನೆಯ ಕೊಟ್ಟಿಗೆಯಲ್ಲಿದ್ದ ಸುಮಾರು ಹತ್ತು ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗತಜ್ಞರೊಬ್ಬರು ರಕ್ಷಿಸಿ, ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಘಟನೆ ಉಡುಪಿ ಜಿಲ್ಲೆಯ ಹೆಬ್ರಿ ಮೇಲ್ ಪೇಟೆಯಲ್ಲಿ ನಡೆದಿದೆ.
ಹೆಬ್ರಿ ಮೇಲ್ ಪೇಟೆಯ ಮನೆಯ ಕೊಟ್ಟಿಗೆಯಲ್ಲಿ ಕಾಳಿಂಗ ಸರ್ಪವೊಂದು ಇದ್ದದನ್ನು ನೋಡಿದ ಮನೆಯವರು ಕೂಡಲೇ, ಉರಗ ತಜ್ಞ ನಾಗರಾಜ ನಾಯ್ಕ್ ಅವರಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ನಾಗರಾಜ ನಾಯ್ ಕಾಳಿಂಗ ಸರ್ಪವನ್ನು ರಕ್ಷಿಸಿ ಸೋಮೇಶ್ವರ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.