UDUPI : ಬಾವಿಗೆ ಇಳಿದು ಶವ ಮೇಲಕ್ಕೆತ್ತಿದ ಪೊಲೀಸ್ ಸಿಬ್ಬಂದಿ
Friday, September 16, 2022
ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕನ ಶವವನ್ನು ಪೊಲೀಸ್ ಸಿಬ್ಬಂದಿ ಬಾವಿಗೆ ಇಳಿದು ಮೇಲಕ್ಕೆ ಎತ್ತಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೊಸಂಗಡಿ ಬಳಿ ನಡೆದಿದೆ.
ಹೊಸಂಗಡಿಯ ಅತ್ತಿಕೊಡ್ಲು ಸ್ಥಳೀಯ ನಿವಾಸಿ ವಿನಯ ಶೆಟ್ಟಿ(33) ಆತ್ಮಹತ್ಯೆ ಮಾಡಿಕೊಂಡಿದ್ದ. ಪೊಲೀಸರು ಬಂದಾಗ ಶವ ಮೇಲೆತ್ತಲು ಯಾರೂ ಸಿದ್ಧರಿರಲಿಲ್ಲ. ಬಳಿಕ ಪೊಲೀಸ್ ಸಿಬ್ಬಂದಿ ಪ್ರಕಾಶ್, ಸ್ವತಃ ಬಾವಿಗಿಳಿದು ಹಗ್ಗದ ಮೂಲಕ ಶವ ಮೇಲೆತ್ತಿದ್ದಾರೆ. ಸ್ಥಳೀಯ ಹೊಟೇಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ ವಿನಯ್, ಆತ್ಮಹತ್ಯೆ ಗೆ ನಿಖರ ಕಾರಣ ತಿಳಿದು ಬಂದಿಲ್ಲಾ. ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.