-->

`ಆಳ್ವಾಸ್ ಪ್ರಗತಿ -2022’- : ಅಕ್ಟೋಬರ್14 ಹಾಗೂ 15 ರಂದು ಬೃಹತ್ ಉದ್ಯೋಗ ಮೇಳ

`ಆಳ್ವಾಸ್ ಪ್ರಗತಿ -2022’- : ಅಕ್ಟೋಬರ್14 ಹಾಗೂ 15 ರಂದು ಬೃಹತ್ ಉದ್ಯೋಗ ಮೇಳ

 

 


ಮಂಗಳೂರು:ಆಳ್ವಾಸ್ ಶಿಕ್ಷಣ ಪತಿಷ್ಠಾನದ ವತಿಯಿಂದ ಆಯೋಜಿಸಲ್ಪಡುತ್ತಿರುವ ಬೃಹತ್ ಉದ್ಯೋಗ ಮೇಳ `ಆಳ್ವಾಸ್ ಪ್ರಗತಿ-2022’ ಪ್ರಮುಖ ವಲಯಗಳ ಉದ್ಯೋಗ ಅವಕಾಶಗಳ ಮೇಳೈಕೆಯೊಂದಿಗೆ ಅಕ್ಟೋಬರ್ 14 ಹಾಗೂ 15ರಂದು ಇಲ್ಲಿನ ವಿದ್ಯಾಗಿರಿಯ ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆಯ ಮ್ಯಾನೇಜ್ಮೆಂಟ್ ಟ್ರಸ್ಟಿ,  ವಿವೇಕ್ ಆಳ್ವ ತಿಳಿಸಿದರು.

 

ಮಂಗಳೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು `ಆಳ್ವಾಸ್ ಪ್ರಗತಿಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು 2007ರಿಂದ ನಡೆಸಿಕೊಂಡು ಬರುತ್ತಿರುವ ಬೃಹತ್ ಉದ್ಯೋಗ ಮೇಳವಾಗಿದ್ದು, ಸಂಸ್ಥೆಯ ಸಿಎಸ್ಆರ್ ಚಟುವಟಿಕೆಯ ಭಾಗವಾಗಿ ಗ್ರಾಮೀಣ ಭಾಗದ ಪ್ರತಿಭಾವಂತ ಉದ್ಯೋಗಾಕಾಂಕ್ಷಿಗಳಿಗೆ ಉಚಿತವಾಗಿ ವಿಶೇಷ ಔದ್ಯೋಗಿಕ ನೆರವು ನೀಡುವ ಉದ್ದೇಶವನ್ನು ವ್ಯವಸ್ಥಿತವಾಗಿ ಪೂರೈಸುತ್ತಾ ಬಂದಿದೆ. 

ಆಳ್ವಾಸ್ ಪ್ರಗತಿ-2022 ಹನ್ನೆರಡನೇ ಆವೃತ್ತಿಯಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು, ಐಟಿ, ಐಟಿಎಸ್, ಮ್ಯಾನುಫ್ಯಾಕ್ಚರಿಂಗ್, ಹೆಲ್ತ್ಕೇರ್ ಮತ್ತು ಫಾರ್ಮಾ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಆಟೋಮೊಬೈಲ್, ಹಾಸ್ಪಿಟಾಲಿಟಿ, ಟೆಲಿಕಾಂ, ಮಾಧ್ಯಮ, ಶಿಕ್ಷಣ ಮತ್ತು ಎನ್ಜಿಓಗಳನ್ನು ಪ್ರತಿನಿಧಿಸುವ ಉನ್ನತ ಕಂಪೆನಿಗಳು ನೇಮಕಾತಿ ನಡೆಸಲಿವೆ. ಕಂಪೆನಿಗಳು ಪದವಿ ಮತ್ತು  ಸ್ನಾತಕೋತ್ತರ ಪದವೀಧರರು, ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್, ಇಂಜಿನಿಯರಿಂಗ್, ಕಲಾ, ವಾಣಿಜ್ಯ ಹಾಗೂ ಮ್ಯಾನೇಜ್ಮೆಂಟ್, ಬೇಸಿಕ್ ಸೈನ್ಸ್, ನರ್ಸಿಂಗ್, ಐಟಿಐ, ಡಿಪ್ಲೊಮಾ, ಪಿಯುಸಿ ಎಸ್ಎಸ್ಎಲ್ಸಿ ಹಾಗೂ ಇತರ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಿವೆ.

ಆಳ್ವಾಸ್ ಪ್ರಗತಿಯಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳು http://alvaspragati.com/CandidateRegistrationPage  ನಲ್ಲಿ ಕಡ್ಡಾಯವಾಗಿ ಉಚಿತ ಆನ್ಲೈನ್ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಕಂಪೆನಿಗಳ ವಿವರ ಹಾಗೂ ನವೀಕೃತ ಮಾಹಿತಿಗಳನ್ನು ಅಧಿಕೃತ ವೆಬ್ಸೈಟ್ www.alvaspragati.com ನಲ್ಲಿ ಪ್ರಕಟಿಸಲಾಗುವುದು . ಆಳ್ವಾಸ್ ಸಂಸ್ಥೆಯ ಪರಿಣತ ತಂಡದಿA `ಆಳ್ವಾಸ್ ಪ್ರಗತಿಯಲ್ಲಿ ಉದ್ಯೋಗ ನೀಡುವ ಕಂಪೆನಿಗಳ ಮಾಹಿತಿ, ಸಂದರ್ಶನಾ ಕೌಶಲ್ಯಗಳ ತರಬೇತಿಯನ್ನು ವಿವಿಧ ಕಡೆಗಳಲ್ಲಿ ಆನ್ಲೈನ್ ಹಾಗೂ ಆಫ್ಲೈನ್ ಆಗಿ ನಡೆಸಲಾಗುವುದು 

   `ಆಳ್ವಾಸ್ ಪ್ರಗತಿ-2022’ ಉತ್ತಮ ಉದ್ಯೋಗಾವಕಾಶಗಳ ಮಹಾಪೂರ

                ಆಳ್ವಾಸ್ ಪ್ರಗತಿಗೆ ಈವರೆಗೆ 110 ಕಂಪನಿಗಳು ನೋಂದಾಯಿಸಿಕೊAಡಿದ್ದು ಮತ್ತು ಹೆಚ್ಚುವರಿಯಾಗಿ 96 ಕಂಪನಿಗಳು ಉದ್ಯೋಗಾವಕಾಶ ನೀಡಲಿವೆ. ಒಟ್ಟು 200ಕ್ಕೂ ಅಧಿಕ ಕಂಪೆನಿಗಳು ಭಾಗವಹಿಸುವ ನಿರೀಕ್ಷೆಯಿದೆ.

                ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರಿಗೆ ಐಸಿಐಸಿಐ, ಆ್ಯಕ್ಸಿಸ್,  ಕೋಟಕ್ ಮಹೀಂದ್ರಾ ಬ್ಯಾಂಕ್Aತಹ ಪ್ರತಿಷ್ಠಿತ ಬ್ಯಾಂಕ್ಗಳು ಬಹುಅವಕಾಶಗಳನ್ನು ನೀಡಲಿವೆ

                ಅಮೇಝಾನ್, ನೆಟ್ಮೆಡ್ಸ್, ಅವಿನ್ ಸಿಸ್ಟಮ್ಸ್, ಮೆಡ್ ಪ್ಯಾಕ್ ಸಿಸ್ಟಮ್ಸ್ನಂತಹ ಪ್ರಮುಖ ಐಟಿ ಕಂಪೆನಿಗಳು ಭಾಗವಹಿಸಲಿವೆ

                ಮಂಗಳೂರು ಮೂಲದ ಐಟಿ ಕಂಪನಿಗಳಾದ ಕೋಡ್ಕ್ರಾಫ್ಟ್ ಟೆಕ್ನಾಲಜೀಸ್, ವಿನ್ಮ್ಯಾನ್ ಸಾಫ್ಟ್ವೇರ್, ದಿಯಾ ಸಿಸ್ಟಮ್ಸ್, ಅದ್ವೈತ ಸಿಸ್ಟಮ್ಸ್ ಮುಂತಾದುವುಗಳು ಉದ್ಯೋಗಾವಕಾಶಗಳನ್ನು ನೀಡಲಿವೆ

 

 

                ಉತ್ಪಾದನಾ ವಲಯದಲ್ಲಿ ಏಸ್ ಮ್ಯಾನುಫ್ಯಾಕ್ಚರಿಂಗ್, ಸನ್ಸೆರಾ ಇಂಜಿನಿಯರಿಂಗ್ ಲಿಮಿಟೆಡ್, ಸ್ಟಂಪ್ ಶೂಲೆ ಆ್ಯಂಡ್ ಸೋಮಪ್ಪ ಸ್ಪ್ರಿಂಗ್ಸ್ ಪ್ರೆöÊ ಲಿ, sಸ್ವಿಚ್ಗೇರ್ ಆ್ಯಂಡ್ ಕಂಟ್ರೋಲ್ ಪೈ. ಲಿ, ಓರಿಯೆಂಟ್ ಬೆಲ್ ಪ್ರೈ. ಲಿ, ಹೀಗೆ ವರ್ಷ ಮೆಕ್ಯಾನಿಕಲ್ ಇಂಜಿನಿಯರ್ಗಳಿಗಾಗಿ 100ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಇರಲಿವೆ.

                 ಗಲ್ಫ್ನ `ಎಕ್ಸಪರ್ಟೈಸ್ಬಹುರಾಷ್ಟ್ರೀಯ ಕಂಪೆನಿ ಮೆಕ್ಯಾನಿಕಲ್ ಇಂಜಿನಿಯರ್ಗಳನ್ನು ನೇಮಕಾತಿ ನಡೆಸಲಿದೆ

                ಟೊಯೊಟಾ ಇಂಡಸ್ಟ್ರೀಸ್ ಇಂಜಿನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಹೋಂಡಾ, ಫೌರೆಸಿಯಾ ಎಮಿಷನ್ಸ್ ಕಂಟ್ರೋಲ್ ಟೆಕ್ನಾಲಜೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಟಫೆ, ಹರಿತಾ ಫೆಹ್ರೆರ್ ಲಿಮಿಟೆಡ್, ಟೊಯೋಟಾ ಸುಶೋ ಸ್ಟೀಲ್ ಸರ್ವಿಸ್ ಇಂಡಿಯಾ ಪ್ರೈ ಲಿಮಿಟೆಡ್, ಎಒ ಸ್ಮಿತ್ ಇಂಡಿಯಾ ವಾಟರ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಇನ್ನಿತರ ಐಟಿಐ ಹಾಗೂ ಡಿಪ್ಲೊಮೊ ಸಂಬAಧಿತ ಕಂಪೆನಿಗಳು ನೇಮಕಾತಿ ಮಾಡಿಕೊಳ್ಳಲಿವೆ

                ಮೈಸೂರು ಭಾಗದ ಕಂಪನಿಗಳಲ್ಲಿ ಕೇನ್ಸ್ ಟೆಕ್ನಾಲಜಿ, ವುರ್ತ್ ಎಲೆಕ್ಟ್ರೋನಿಕ್, ಟಿವಿಎಸ್ ಮೋಟಾರ್ಸ್, ಸುಂದರA ಆಟೋ ಕಾಂಪೊನೆAಟ್ಸ್ ಲಿಮಿಟೆಡ್, ಮತ್ತು ಇನ್ನೂ ಕೆಲವು ಕಂಪನಿಗಳು ಭಾಗವಹಿಸಲಿದೆ.

                ಬಿಕಾಂ ಪದವೀಧರರಿಗೆ ಉತ್ಪಾದನಾ ವಲಯದಲ್ಲಿ ಹೆಚ್ಚಿನ ಅಕೌಟೆಂಟ್ ಹುದ್ದೆಗಳು ಹಾಗೂ ಇತರ ಪದವೀಧರರಿಗೆ  ವಿವಿಧ ವಲಯಗಳಲ್ಲಿ ವಿಪುಲ ಉದ್ಯೋಗಾವಕಾಶಗಳು ಇರಲಿವೆ.

                ನರ್ಸಿಂಗ್, ಬಿ.ಫಾರ್ಮಾ, ಎಂ.ಪಾರ್ಮಾ, ಬಿಎನ್ವೈಎಸ್ ಹಾಗೂ ಬಿಪಿಟಿ ವಿದ್ಯಾರ್ಹತೆಗಳೊಂದಿಗೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುವ ಪ್ರಮುಖ ಆಸ್ಪತ್ರೆಗಳಾದ ನಾರಾಯಣ ಹೃದಯಾಲಯ ಸ್ಪೆಷಾಲಿಟಿ ಆಸ್ಪತ್ರೆ, ಫೋರ್ಟಿಸ್ ಆಸ್ಪತ್ರೆ ನಾರಾಯಣ ಹೆಲ್ತ್ ಕೇರ್, ಇಂಡಿಯಾನ ಹಾಸ್ಪಿಟಲ್ ಆ್ಯಂಡ್ ಹಾರ್ಟ್ ಇನ್ಸಿ÷್ಟಟ್ಯೂಟ್, ಕೆಎಂಸಿ ಆಸ್ಪತ್ರೆ, ಗೋವಾದ ಮಣಿಪಾಲ್ ಆಸ್ಪತ್ರೆ ಅಖಿಲಾ ಸೌಖ್ಯ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್, ಸ್ಪರ್ಶ್ ಹಾಸ್ಪಿಟಲ್ಸ್, ಸುಖಿನೋ ಹೆಲ್ತ್ ಕೇರ್ ಸೊಲ್ಯೂಷನ್ಸ್ ಪ್ರೈ. ಲಿಮಿಟೆಡ್ ಇತ್ಯಾದಿ ಆಸ್ಪತ್ರೆಗಳು ಉದ್ಯೋಗ ನೀಡಲಿವೆ

                ನರ್ಸಿಂಗ್ ಪದವೀಧರ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆಯಲಿದ್ದಾರೆ

                ಬಿಗ್ ಬಾಸ್ಕೆಟ್, ಟ್ರೆಂಟ್ ಹೈಪರ್ ಮಾರ್ಕೆಟ್, ಕೆಫೆ ಕಾಫಿ ಡೇ, ಮಣಿರಂಜನ್ ಡೀಸೆಲ್ ಸೇಲ್ಸ್ ಅಂಡ್ ಸರ್ವಿಸ್ ಲಿಮಿಟೆಡ್ ಸೇರಿದಂತೆ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರನ್ನು ನೇಮಿಸಿಕೊಳ್ಳುವ ಪ್ರಮುಖ ಕಂಪನಿಗಳು

                ಮಹೀಂದ್ರಾ, ಮಾಂಡೋವಿ ಮೋಟಾರ್ಸ್, ಆಟೋ ಮ್ಯಾಟ್ರಿಕ್ಸ್, ತಿರುಮಲ ಮೋಟಾರ್ಸ್  ಮುಂತಾದ ಆಟೋಮೊಬೈಲ್ ಶೋರೂಮ್ಗಳು ಡಿಪ್ಲೊಮಾ ಮತ್ತು ಪದವಿ ಪದವೀಧರರಿಗೆ ಅವಕಾಶ ನೀಡಲಿವೆ

                ಶೈಕ್ಷಣಿಕ ವಲಯದಲ್ಲಿ ಎಕ್ಸ್ಟ್ರಾಮಾರ್ಕ್ಸ್, ದೇಶ್ಪಾಂಡೆಫೌಂಡೇಶನ್,  ಗೋವನ್ ಇನ್ಸ್ಟಿಟ್ಯೂಟ್ ಆಫ್ ಕೊಚ್ಚಿನ್ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರನ್ನು ನೇಮಿಸಿಕೊಳ್ಳಲಿದೆ

                ಕಟ್ಟಡ ನಿರ್ಮಾಣ ಹಾಗೂ ಸಿಮೆಂಟ್ ಉತ್ಪಾದನಾ ವಲಯದಲ್ಲಿ ಅನುಭವಿ ಹಾಗೂ ಪ್ರಸಕ್ತ ಪದವಿ ಪೂರೈಸಿದ ಸಿವಿಲ್ ಇಂಜಿನಿಯರಿಂಗ್ ಹಾಗೂ ಡಿಪ್ಲೊಮೋ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಿದ್ದಾರೆ.

ವಿಶೇಷ ಸೂಚನೆ:

                ಹೊರ ಜಿಲ್ಲೆಗಳಿಂದ ಬರುವ ಉದ್ಯೋಗಾಕಾಂಕ್ಷಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು.

                ನರ್ಸಿಂಗ್ ಹಾಗೂ ಐಟಿಐ ಅಭ್ಯರ್ಥಿಗಳಿಗೆ ಬಸ್ ಸೌಕರ್ಯ ಕಲ್ಪಿಸಲಾಗುವುದು

                ಐಟಿಐ, ಪಿಯುಸಿ, ಎಸ್ಎಸ್ಎಲ್ಸಿ ಹಾಗೂ ಇನ್ನೂ ಕಡಿಮೆ ವಿದ್ಯಾಭ್ಯಾಸದ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಭ್ಯರ್ಥಿಗಳಿಗೆ ಉಚಿತ ಆನ್ಲೈನ್ ನೋಂದಾವಣಿ ಕಡ್ಡಾಯ.

 

 

 

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಸಂಖ್ಯೆ

9008907716, 9663190590, 7975223865, 9741440490

ಕಂಪೆನಿಗಳು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸುವ ಸಂಖ್ಯೆ: 8971250414

 

ಅಭ್ಯರ್ಥಿಗಳ  ಉಚಿತ ಹಾಗೂ ಕಡ್ಡಾಯ ನೊಂದಾವಣೆಗಾಗಿ :

http://alvaspragati.com/CandidateRegistrationPage

ಕಂಪೆನಿಗಳ ಉಚಿತ ಹಾಗೂ ಕಡ್ಡಾಯ ನೊಂದಾವಣೆಗಾಗಿ:

http://alvaspragati.com/CompanyRegistrationPage

 

ಅಭ್ಯರ್ಥಿಗಳು ಲಗತ್ತಿಸಬೇಕಾದ ಅಗತ್ಯ ದಾಖಲಾತಿಗಳು:

                5-10 ಪಾಸ್ಪೋರ್ಟ್ ಭಾವಚಿತ್ರಗಳು

                ಅಂಕ ಪಟ್ಟಿಗಳು (ನೆರಳಚ್ಚು ಪ್ರತಿಗಳು (xerox)

                ಆನ್ಲೈನ್ ರಿಜಿಸ್ಟ್ರೇಷನ್ ನಂಬರ್/ಐಡಿ

                ಅಭ್ಯರ್ಥಿಗಳು ಉದ್ಯೋಗ ಮೇಳದಂದು ಬೆಳಿಗ್ಗೆ 8 ಗಂಟೆಗೆ ಸ್ಥಳದಲ್ಲಿ ಹಾಜರಿರಬೇಕು

 

ಪತ್ರಿಕಾ ಗೋಷ್ಠಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆಯ ಉದ್ಯೋಗ ಮತ್ತು ತರಬೇತಿ ವಿಭಾಗ ಮುಖ್ಯಸ್ಥರು ಸುಶಾಂತ್ ಅನಿಲ್ ಲೋಬೊ, ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಸಂಯೋಜಕರು ಪ್ರಸಾದ್ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಪದ್ಮನಾಭ ಶೆಣೈ ಉಪಸ್ಥಿತರಿದ್ದರು

 

 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99