-->

UDUPI : ಆನ್ಲೈನ್‌ನಲ್ಲಿ 3 ಲಕ್ಷ ವಂಚನೆ : ಮಹಾರಾಷ್ಟ್ರದಲ್ಲಿ ವಂಚಕರನ್ನು ವಶಕ್ಕೆ ಪಡೆದ ಉಡುಪಿ ಪೊಲೀಸರು

UDUPI : ಆನ್ಲೈನ್‌ನಲ್ಲಿ 3 ಲಕ್ಷ ವಂಚನೆ : ಮಹಾರಾಷ್ಟ್ರದಲ್ಲಿ ವಂಚಕರನ್ನು ವಶಕ್ಕೆ ಪಡೆದ ಉಡುಪಿ ಪೊಲೀಸರು

ಆನ್ಲೈನ್ ವಂಚನೆಯಿಂದ ಉಡುಪಿಯ ಮಂದಾರ್ತಿ ಮೂಲದ ಉದ್ಯಮಿಯೊಬ್ಬರು ಮೂರು ಲಕ್ಷ ಕಳೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಉಡುಪಿ ಪೊಲೀಸ್ ತಂಡ ಆರೋಪಿಗಳನ್ನು ಮಹಾರಾಷ್ಟ್ರದಲ್ಲಿ ವಶಕ್ಕೆ ಪಡೆದು, ಉಡುಪಿಗೆ ಕರೆತಂದಿದ್ದಾರೆ.
ಸೆಪ್ಟೆಂಬರ್ .4ರಂದು, ವ್ಯಕ್ತಿಯೊಬ್ಬ ಯುರೋ ಬಾಂಡ್ ಕಂಪನಿಯ ಮಾಲಕನೆಂದು, ಯುರೋ ಬಾಂಡ್ ಡೀಲರ್ ಆಗಿರುವ ಮಂದಾರ್ತಿಯ ಉದ್ಯಮಿಯೊಬ್ಬರಿಗೆ ಕರೆ ಮಾಡಿ, ತನ್ನ ಮಗ ಅಪಘಾತಕ್ಕೀಡಾಗಿ ಗಾಯಗೊಂಡಿದ್ದಾನೆ, ಮಗನನ್ನು ಮಂಗಳೂರಿನ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಲು ತುರ್ತಾಗಿ 3 ಲಕ್ಷ ರೂ. ಹಣವನ್ನು ಖಾತೆಗೆ ಕಳುಹಿಸಿ ಕೊಡುವಂತೆ ವಿನಂತಿ ಮಾಡಿದ್ದ. ಇದಕ್ಕೆ ಸ್ಪಂದಿಸಿದ ಉದ್ಯಮಿ ತನ್ನ 50 ಸಾವಿರ ಹಾಗೂ ಸ್ನೇಹಿತರ ಖಾತೆಯಿದ 250000 ಲಕ್ಷ ಹೀಗೆ ಒಟ್ಟು 3 ಲಕ್ಷ ರೂ. ಹಣವನ್ನು ಆನ್‌ಲೈನ್ ಮೂಲಕ ಹಾಕಿದ್ದರು. ನಂತರ ಅನುಮಾನಗೊಂಡು ಯುರೋ ಬಾಂಡ್ ಕಂಪನಿಗೆ ಸಂಪರ್ಕಿಸಿ ಮಾಹಿತಿ ಪಡೆದಾಗ ಉದ್ಯಮಿ ಮೋಸ ಹೋಗಿರುವುದು ತಿಳಿದುಬಂತು. ಕೂಡಲೇ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು,  ವಂಚಕನ‌ ನಂಬರ್ ಟ್ರೇಸ್ ಮಾಡಿದಾಗ,  ಗುಜರಾತ್ ರಾಜ್ಯದ ಸೂರತ್ ಪ್ರದೇಶದಲ್ಲಿ ತೋರಿಸುತ್ತಿತ್ತು. ಅವನು ಮಹಾರಾಷ್ಟ್ರ ಥಾಣೆ ಮೂಲದ ವ್ಯಕ್ತಿಯೊಬ್ಬನ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡಿರುವುದು ತಿಳಿದುಬಂತು. ಕೂಡಲೇ ಉಡುಪಿ ಪೊಲೀಸ್ ತಂಡ, ಮಹಾರಾಷ್ಟ್ರಕ್ಕೆ ತೆರಳಿ ಆನ್ಲೈನ್ ವಂಚನೆ ಮಾಡಿದ ವಂಚಕ ಹಾಗೂ ಆತನ ಜೊತೆಗೆ ಇದ್ದ ಇಬ್ಬರನ್ನು ವಶಕ್ಕೆ ಪಡೆದು ಉಡುಪಿಗೆ ಕರೆ ತಂದಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99