
ಕಳ್ಳನನ್ನು ರೈಲಿನ ಕಿಟಕಿ ಹೊರಗಿಂದ 15 ಕಿಮೀ ನೇತಾಡಿಸಿದ ಪ್ರಯಾಣಿಕರು... Video ನೋಡಿ
Friday, September 16, 2022
ಬಿಹಾರ್ : ಕಳ್ಳನೊಬ್ಬ ಚಲಿಸುತ್ತಿದ್ದ ರೈಲಿನ ಕಿಟಕಿಯಿಂದ ಮೊಬೈಲ್ ಕದಿಯಲು ಯತ್ನಿಸುತ್ತಿದ್ದಾಗ ಆತನನ್ನು ರೈಲಿನ ಕಿಟಕಿ ಹೊರಗಿಂದ 15 ಕಿಮೀ ನೇತಾಡಿಸಿದ ಘಟನೆ ಬಿಹಾರದ ಬೇಗುಸರಾಯ್ ನಲ್ಲಿ ನಡೆದಿದೆ.
ರೈಲು ನಿಲ್ದಾಣದಲ್ಲಿ ನಿಂತಿದ್ದ ರೈಲಿನ ಕಿಟಕಿಯೊಳಗೆ ಕೈ ಹಾಕಿದ ಕಳ್ಳ ಪ್ರಯಾಣಿಕರೊಬ್ಬರ ಮೊಬೈಲ್ ಕದಿಯಲು
ಯತ್ನಿಸಿದ್ದ. ಕೂಡಲೇ ಆ ಪ್ರಯಾಣಿಕ ಕಳ್ಳನ ಕೈ ಹಿಡಿದಿದ್ದಾನೆ. ಆತನ ಸನಿಹದಲ್ಲೇ ಇದ್ದ ಮತ್ತೊಬ್ಬ ಪ್ರಯಾಣಿಕ ಕಳ್ಳನ ಇನ್ನೊಂದು ಕೈಯನ್ನು ಹಿಡಿದುಕೊಂಡಿದ್ದಾನೆ. ಆಗ ನಿಂತಿದ್ದ ರೈಲು ನಿಲ್ದಾಣದಿಂದ ಹೊರಟಿದೆ.
ಆ ಇಬ್ಬರು ಪ್ರಯಾಣಿಕರು ಕಳ್ಳನನ್ನು 15 ಕಿಮೀವರೆಗೆ ಹೀಗೆ ಹಿಡಿದಿಟ್ಟುಕೊಂಡು ನೇತಾಡಿಸಿದ್ದಾರೆ. ಕಳ್ಳನನ್ನು ರೈಲಿನ ಪ್ರಯಾಣಿಕರು ಬೇಗುಸರಾಯ್‌ನ ಸಾಹೇಬ್‌ಪುರ ಕಮಲ್ ನಿಲ್ದಾಣದಿಂದ ಖಗಾರಿಯಾಕ್ಕೆ ಕೈ ಹಿಡಿದು ನೇತಾಡಿಸುತ್ತಲೇ ಕರೆದುಕೊಂಡು ಬಂದಿದ್ದಾರೆ. ರೈಲು ಓಡುತ್ತಲೇ ಇರುವಾಗ ಕಳ್ಳ .. ‘ನನ್ನ ಕೈ ಮುರಿಯುತ್ತದೆ.. ಬಿಟ್ಟುಬಿಡಿ’ ಎಂದು ಅಂಗಲಾಚಿದ್ದಾನೆ. ಅವನು ಎಷ್ಟು ಅಂಗಲಾಚಿದರೂ ಪ್ರಯಾಣಿಕರು ಅವರನ್ನು ಬಿಡಲಿಲ್ಲ. ಸಾಹೇಬ್‌ಪುರ ಕಮಾಲ್ ನಿಲ್ದಾಣದಿಂದ ಖಗರಿಯಾದ ದೂರ 15 ಕಿಮೀ ವರೆಗೆ ಕಳ್ಳನನ್ನು ಪ್ರಯಾಣಿಕರು ಹಿಡಿದಿಟ್ಟುಕೊಂಡಿದ್ದರು.
ಕಿಟಕಿಯ ಹೊರಗಿನಿಂದ ನೇತಾಡಿಸುತ್ತಲೇ ಕಳ್ಳನನ್ನು 15 ಕಿಮೀ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಕೆಲ ಪ್ರಯಾಣಿಕರು ಇದನ್ನು ವಿಡಿಯೋ ಮಾಡಿದ್ದಾರೆ. ರೈಲು ಖಗಾರಿಯಾ ನಿಲ್ದಾಣಕ್ಕೆ ಬಂದಾಗ ಪ್ರಯಾಣಿಕರು ಕಳ್ಳನನ್ನು ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈತನ ಹೆಸರು ಪಂಕಜ್ ಕುಮಾರ್ ಎಂಬುದಾಗಿದ್ದು, ಬೇಗುಸರಾಯ್‌ನ ಸಾಹೇಬ್‌ಪುರ ಕಮಲ್ ಪೊಲೀಸ್ ಠಾಣೆಯ ನಿವಾಸಿಯಾಗಿದ್ದಾನೆ.