UDUPI : ತಂದೆ,ಮಗನ ಸಾವಿಗೆ ಕಾರಣವಾದ 16 ವರ್ಷದ ಚಾ(ಬಾ)ಲಕ.. ! 14 ಚಕ್ರದ ಲಾರಿ ಚಲಾಯಿಸುತ್ತಿದ್ದ 16 ವರ್ಷದ ಪೋರ
Friday, September 16, 2022
ಇತ್ತೀಚೆಗೆ ಉಡುಪಿ ಜಿಲ್ಲೆಯ ಉಚ್ಚಿಲದಲ್ಲಿ ನಡೆದ ಭೀಕರ ಅಪಘಾತದಲ್ಲಿ ತಂದೆ ಮಗ ಸಾವನ್ಪಿದ್ದರು. ಅಪಘಾತವಾದ ಬಳಿಕ ಅಪಘಾತಕ್ಕೆ ಕಾರಣವಾದ ಲಾರಿಯೊಂದಿಗೆ ಚಾಲಕ ಪರಾರಿಯಾಗಿದ್ದ. ಆದ್ರೆ ನಿನ್ನೆ ಮೂಡಬಿದಿರೆಯ ಸಮೀಪ ಲಾರಿ ಹಾಗೂ ಚಾಲಕ ಶೇಖರ್ ಎಂಬಾತನನ್ನು ವಶಕ್ಕೆ ಪಡೆದಾಗ, ಅಪಾಯಕಾರಿ ಅಂಶ ಬೆಳಕಿಗೆ ಬಂದಿದೆ. ಅದೇನಂದ್ರೆ ಅಪಘಾತವಾದ ಲಾರಿ ಚಾಲನೆ ಮಾಡುತ್ತಿದ್ದುದು, ೧೬ ವರ್ಷದ ಬಾಲಕ .
ಹೌದು... ಅಪಘಾತವಾದ ಲಾರಿಯಲ್ಲಿ ಕ್ಲೀನರ್ ಆಗಿ ಈ ಬಾಲಕ ದುಡಿಯುತಿದ್ದ, ಲಾರಿ ಚಲಾಯಿಸುವ ಅತೀವ ಆಸಕ್ತಿ ಇದ್ದ ಬಾಲಕ ಈ ಹಿಂದೆ ಕೂಡಾ ಹಲವು ಬಾರಿ ಲಾರಿ ಚಲಾಯಿಸಿದ್ದ. ಅಪಘಾತಕ್ಕೂ ೨೦ ನಿಮಿಷ ಮುನ್ನ ತನಗೆ ನಿದ್ದೆ ಬರುತ್ತಿದೆ ಎಂದಿದ್ದನಂತೆ, ಮುಂದೆ ಟೀ ಶಾಪ್ ಇದೆ ಅಲ್ಲಿ ಟೀ ಕುಡಿದು ಬಳಿಕ ನಾನು ಗಾಡಿ ಓಡಿಸುತ್ತೇನೆ ಅಂತ ಚಾಲಕ ಶೇಖರ್ ಹೇಳಿದ್ದ. ಆದ್ರೆ ನಿದ್ದೆ ಮಂಪರಿನಲ್ಲಿ ಲಾರಿ ಚಲಾಯಿಸಿ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ನಿಂತಿದ್ದ ತಂದೆ ಮಗನಿಗೆ ಢಿಕ್ಕಿ ಹೊಡೆದಿದ್ದ. ಅಪಘಾತದ ತೀವ್ರತೆ ಬೆಳಗಾವಿ ಮೂಲದ ಪ್ರಭಾಕರ್, ಸ್ಥಳದಲ್ಲೇ ಸಾವನ್ಪಿದ್ರೆ, ಮಗ ಸಮರ್ಥ್ ಆಸ್ಪತ್ರೆಯಲ್ಲಿ ಸಾವನ್ಪದ್ದ. ಕಾಪು ಬಳಿಯ ಆನೆಗುಂದಿ ಸರಸ್ವತಿ ಪೀಠದಿಂದ ಗಣೇಶನ ಹಬ್ಬಕ್ಕೆ ರಜೆಯಲ್ಲಿ ಊರಿಗೆ ತೆರಳಿದ್ದ ಏಳನೇ ತರಗತಿಯ ಸಮರ್ಥ್, ಮಂಗಳವಾರ ಸಂಜೆ ಬೆಳಗಾವಿಯ ಹುಕ್ಕೇರಿ ಭಗವಾನ್ ಗಲ್ಲಿಯ ನಿವಾಸಿ ತಂದೆ ಪ್ರಭಾಕರ್ ಅವರೊಂದಿಗೆ ಹೊರಟವರು ಉಚ್ಚಿಲಕ್ಕೆ ಬುಧವಾರ ಬೆಳಿಗ್ಗೆ ಸರಕಾರಿ ಬಸ್ಸಿನಲ್ಲಿ ಆಗಮಿಸಿದ್ದರು. ಬಸ್ಸಿನಿಂದ ಇಳಿದು
ರಸ್ತೆ ಪಕ್ಕ ನಿಂತಿದ್ದಾಗ ತಂದೆ ಮಗನಿಗೆ ಲಾರಿ ಢಿಕ್ಕಿ ಹೊಡೆದಿತ್ತು. ಸದ್ಯ ಚಾಲಕ ಶೇಖರ್‌ಗೆ ನ್ಯಾಯಾಂಗ ಬಂಧನ ವಿಧಿಸಿ, ಬಾಲಕನನ್ನು ಪೋಲಿಸರು ಖಾಸಗಿ ಬಾಲ ಮಂದಿರಕ್ಕೆ ಕಳುಹಿಸಿದ್ದಾರೆ.