
UDUPI : ದೇವಸ್ಥಾನಗಳ ನಗದು ಕಳವು ಪ್ರಕರಣ : ಆರೋಪಿಗೆ ಜಾಮೀನು ಮಂಜೂರು
ಉಡುಪಿ ಜಿಲ್ಲೆಯ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಹಲವು ದೇವಸ್ಥಾನದ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಕರುಣಾಕರ್ ದೇವಾಡಿಗನಿಗೆ ಉಡುಪಿ ನಗರದ ಪ್ರಧಾನ ಸಿವಿಲ್ ಮತ್ತು ಪ್ರಥಮ ದರ್ಜೆ ದಂಡಾಧಿಕಾರಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಮರವಂತೆಯಲ್ಲಿ ಆರೋಪಿ ದೇಗುಲದ ಬೀಗ ಒಡೆದು ಒಳ ಹೋಗುತ್ತಿರುವುದು ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇತನ ಬಂಧನದ ನಂತರ ಜಿಲ್ಲೆಯ ಬೇರೆ ದೇವಸ್ಥಾನಗಳಿಂದಲೂ ನಗದು ಹಾಗೂ ವಸ್ತುಗಳನ್ನು ಕದ್ದಿರುವುದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ. ಆರೋಪಿಗಳ ಪರ ವಕೀಲರಾದ ಕೆ.ಎಂ.ಇಲ್ಯಾಸ್ ಹಾಗೂ ಮುಳ್ಳಿಕಟ್ಟೆ ಚರಣರಾಜ್ ಮೆಂಡನ್ ವಾದ ಮಂಡಿಸಿದ್ದರು..