Cinema : ಹುಡುಗರ ಲೈಂಗಿಕ ಸಾಮರ್ಥ್ಯ 2 ನಿಮಿಷ- ಮ್ಯಾಗಿ ತರಹ ಮುಗಿದುಹೋಗುತ್ತೆ- ಜನಪ್ರಿಯ ನಟಿ ಹೀಗೇಕೆ ಹೇಳಿದರು ?
Saturday, September 10, 2022
ರೆಜಿನಾ ಕಸ್ಸಂದ್ರ ಸದ್ಯ ಸುದ್ದಿಯಲ್ಲಿರುವ ನಟಿ, ತನ್ನ ಸಿನಿಮಾ ಮೂಲಕವಲ್ಲ, ನಾಟಿ ಹೇಳಿಕೆ ಮೂಲಕ. ಹೌದು. ಚಂದನ ಹುಡುಗಿ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪುರುಷರ ಲೈಂಗಿಕ ಸಾಮರ್ಥ್ಯವನ್ನು ಮ್ಯಾಗಿಗೆ ಹೋಲಿಕೆ ಮಾಡಿ ಸಖತ್ ಸುದ್ದಿಯಲ್ಲಿದ್ದಾರೆ.
ರೆಜಿನಾ, ಇತ್ತೀಚೆಗೆ ಮಾಧ್ಯಮಕ್ಕೆ ಸಂದರ್ಶನ ನೀಡುವಾಗ, ಹುಡುಗರ ಬಗ್ಗೆ ನನಗೆ ಒಂದು ಜೋಕ್ ಗೊತ್ತಿದೆ. ಆದರೆ, ಅದನ್ನು ಹೇಳಬೇಕೋ ಅಥವಾ ಬೇಡವೋ ಎಂಬುದು ತಿಳಿಯುತ್ತಿಲ್ಲ ಅಂತ ಯೋಚಿಸಿ, ಕೊನೆಗೆ, 'ಹುಡುಗರ ಲೈಂಗಿಕ ಸಾಮರ್ಥ್ಯ ಮ್ಯಾಗಿ ಥರ, ಎರಡೇ ನಿಮಿಷದಲ್ಲಿ ಆಗಿ ಹೋಗುತ್ತದೆ' (Men and Maggi are for 2 minutes) ಎಂದು ನಕ್ಕರು. ಈ ಮಾತನ್ನು ಕೇಳಿ ಅಲ್ಲಿದ್ದವರೂ ನಕ್ಕರು.
ಸದ್ಯ ಈ ತುಣುಕು ಭಾರೀ ವೈರಲ್ ಆಗಿ, ಸುದ್ದಿಯಾಗಿದೆ. ಸೋಶಿಯಲ್ ಮಿಡಿಯಾದಲ್ಲಿ, ನಿಂಗೆ ಹೇಗೆ ಗೊತ್ತಮ್ಮಾ, ತುಂಬಾ ಅನುಭವ ಆಗಿದೆಯಾ ಹಿಂಗೆಲ್ಲ ಕಮೆಂಟ್ ಬರ್ತಾ ಇದೆ..