UDUPI : ದೇವಸ್ಥಾನದ ಬೀಗ ಒಡೆದು ನಗದು ಕಳ್ಳತನ
Saturday, September 10, 2022
ದೇವಸ್ಥಾನದ ಬೀಗ ಒಡೆದು ನಗದು ಕಳ್ಳತನ ನಡೆಸಿರುವ ಘಟನೆ ಉಡುಪಿ ಜಿಲ್ಲೆಯ ಕೋಟ ಸಮೀಪದ ಕಕ್ಕುಂಜೆ ಗ್ರಾಮದ ಕಂಬಿಕಲ್ಲು ಶ್ರೀಮಾಹಗಣಪತಿದಲ್ಲಿ ನಡೆದಿದೆ. ದೇವಸ್ಥಾನದ ಆಡಳಿತ ಟ್ರಸ್ಟಿ ಕೆ.ಶ್ರೀಪತಿ ಭಟ್ ಅವರು ಎಂದಿನಂತೆ, ರಾತ್ರಿ ದೇವಸ್ಥಾನಕ್ಕೆ ಬೀಗಹಾಕಿ ಹೋಗಿದ್ದರು.
ಬೆಳಿಗ್ಗೆ ದೇವಸ್ಥಾನಕ್ಕೆ, ಮೈಕ್ ಆನ್ ಮಾಡಲು ಬಂದ ಶಿವರಾಮ ಶೆಟ್ಟಿ ಎಂಬವರು ದೇವಸ್ಥಾನದಲ್ಲಿ ಕಳವು ಆಗಿರುವ ಸಂಶಯಗೊಂಡು ಕೆ.ಶ್ರೀಪತಿ ಭಟ್ ರವರಿಗೆ ತಿಳಿಸಿದರು. ಕೂಡಲೇ ದೇವಸ್ಥಾನದಕ್ಕೆ ಬಂದ ಶ್ರೀಪತಿ ಭಟ್ ಅವರು ಪರಿಶೀಲಿಸಿದಾಗ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಕೊಠಡಿಯಲ್ಲಿದ್ದ 6,000 ರೂ. ನಗದು ಹಾಗೂ ಕಾಣಿಕೆ ಹುಂಡಿಯ ಅಂದಾಜು 5000 ರೂ ನಗದು ಸಹಿತ 11,000 ರೂ ನಗದು ಕಳವು ಮಾಡಿಕೊಂಡು ಹೋಗಿದ್ದಾರೆ ಎಂಬುದಾಗಿ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.