-->

UDUPI : ಮೀನುಗಾರಿಕಾ ಬೋಟ್ ಮುಳುಗಡೆ : 7 ಮಂದಿ ಮೀನುಗಾರರನ್ನು ರಕ್ಷಣೆ

UDUPI : ಮೀನುಗಾರಿಕಾ ಬೋಟ್ ಮುಳುಗಡೆ : 7 ಮಂದಿ ಮೀನುಗಾರರನ್ನು ರಕ್ಷಣೆ

ಉಡುಪಿಯ ಮಲ್ಪೆ ಬಂದರಿನಿಂದ ಹೊರಟು, ಗಂಗೊಳ್ಳಿ ಸಮೀಪ ಸಮುದ್ರದಲ್ಲಿ ಮುಳುಗಡೆಗೊಂಡಿದ್ದ ಬೋಟ್ ನಲ್ಲಿದ್ದ 7 ಮಂದಿ ಮೀನುಗಾರರನ್ನು ರಕ್ಷಿಣೆ ಮಾಡಲಾಗಿದೆ. ಆ.29 ರಂದು ರಾತ್ರಿ ಮಲ್ಪೆ ಬಂದರಿನಿಂದ ಲತೀಶ್ ಮೆಂಡನ್ ಅವರಿಗೆ ಸೇರಿದ ಶ್ರೀದುರ್ಗಾ ವೈಷ್ಣವಿ ಬೋಟು ತೆರಳಿತ್ತು. ಮೀನುಗಾರಿಕೆ ಮುಗಿಸಿ ವಾಪಸು ಬರುವಾಗ  ಗಂಗೊಳ್ಳಿ  ಸಮೀಪ ಬೋಟಿನ, ಬೋಟ್ ನ ಒಳಗಡೆ ನೀರು ಬರಲಾರಂಭಿಸಿತ್ತು. ಈ ವೇಳೆ ಬೋಟಿನಲ್ಲಿದ್ದ ಕಾರ್ಮಿಕರು ನೀರು ಖಾಲಿ ಮಾಡಲು ಪ್ರಯತ್ನಿಸಿದರೂ ನೀರಿನ ಒಳ ಹರಿವು ಹೆಚ್ಚಾಗಿ ಬೋಟ್‌ನ ಎಂಜಿನ್ ಕೆಟ್ಟು ಹೋಗಿ ಬೋಟು ಮುಳುಗಡೆಗೊಂಡಿತು.
 ಈ ವೇಳೆ ಪಕ್ಕದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸ್ವರ್ಣಮಂಗಳ, ಸಮೃದ್ಧಿ, ಸಮುದ್ರತನಯ ಬೋಟ್‌ ನವರು ತತ್‌ಕ್ಷಣ ಧಾವಿಸಿ ಬಂದು ಬೋಟ್‌ನಲ್ಲಿದ್ದ ಮೀನುಗಾರರನ್ನು ರಕ್ಷಿಸಿದ್ದಾರೆ. 3 ಬೋಟ್‌ನ ಸಹಾಯದಿಂದ ಎಳೆದು ತರುವಾಗ ಸಂಜೆ ಹಂಗಾರಕಟ್ಟೆ ಬೆಂಗ್ರೆ ಸಮೀಪ ಬೋಟು ಸಂಪೂರ್ಣ ಮುಳುಗಡೆಂಡಿತ್ತು. ಘಟನೆಯಿಂದ  50 ಲಕ್ಷ ರೂ. ನಷ್ಟ ಉಂಟಾಗಿದೆ..

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99