
UDUPI : ಮೋದಿ ಅಭಿಮಾನದಿಂದ ದೇಹದಾನ ಮಾಡಿದ ಉಡುಪಿಯ ಯುವತಿ
Saturday, September 17, 2022
ಉಡುಪಿಯ ಅಭಿಮಾನಿ ಶಿಲ್ಪಾ ಮೋದಿ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದೇಹವನ್ನೇ ದಾನ ಮಾಡಿ, ವಿಶೇಷ ಅಭಿಮಾನ ತೋರಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯ ದೊಡ್ಡ ಅಭಿಮಾನಿಯಾಗಿರುವ ಶಿಲ್ಪಾ ಸಾಲಿಯಾನ್ ದೇಹ ದಾನಕ್ಕೆ ನಿರ್ಧಾರ ಮಾಡಿದಾಗ ಸಾಕಷ್ಟು ನಿಯಮಗಳು ಅಡ್ಡ ಬಂದವು.
ಗಂಡ ತಂದೆ ತಾಯಿ ಮತ್ತು ಕುಟುಂಬಸ್ಥರ ಸಹಿ ಇಲ್ಲದೆ ದೇಹ ದಾನ ಮಾಡಲು ಸಾಧ್ಯವಿಲ್ಲ ಎಂದು ಕೆಎಂಸಿಯ ವೈದ್ಯರು ಹೇಳಿದ್ದಾರೆ. ಇಡೀ ಕುಟುಂಬವನ್ನು ಒಪ್ಪಿಸಿ ದೇಹ ದಾನದಿಂದ ಮುಂದೆ ವೈದ್ಯಕೀಯ ಲೋಕಕ್ಕೆ ಆಗಬಹುದಾದ ಉಪಯೋಗಗಳನ್ನು ತಿಳಿಸಿದ ನಂತರ ಕುಟುಂಬ ದೇಹ ದಾನಕ್ಕೆ ಒಪ್ಪಿದೆ.