
UDUPI ; ರಂಗೋಲಿಯಲ್ಲಿ ಮೋದಿ ಹೇಗೆ ಕಂಗೊಳಿಸುತ್ತಾರೆ ನೋಡಿ..!
ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬ. ಅಭಿಮಾನಿಗಳು ಭಿನ್ನ ವಿಭಿನ್ನ ರೀತಿಯಲ್ಲಿ ತಮ್ಮನಾಯಕನಿಗೆ ಶೋಭ ಕೋರುತ್ತಿದ್ದಾರೆ. ಅದರಂತೆ ಉಡುಪಿಯ ಸಾಸ್ತಾನದಲ್ಲಿ ಮೋದಿ ಅಭಿಮಾನಿಗಳು, ಮೋದಿಯವರ ಭಾವಚಿತ್ರವನ್ನು ರಂಗೋಲಿಯಲ್ಲಿ ಬಿಡಿಸಿ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಾರೆ.
ಚಿತ್ರ ಕಲಾವಿದೆ ಸ್ಪೂರ್ತಿ ಆಚಾರ್ ಮತ್ತು ಅಶ್ವತ್ಥ್ ಆಚಾರ್ಯ ಕೈಚಳಕದಲ್ಲಿ 12 ಅಡಿ ಎತ್ತರ 7.5 ಅಡಿ ಅಗಲವಾಗಿರುವ ಮೋದಿ ಚಿತ್ರವಿರುವ ರಂಗೋಲಿ ಬಿಡಿಸಲಾಗಿದೆ. ಸುಮಾರು 15 ಗಂಟೆಗಳ ಕಾಲ ಶ್ರಮವಹಸಿ ಮುತುವರ್ಜಿಯಿಂದ ಈ ವಿಶೇಷ ರಂಗೋಲಿ ಬಿಡಿಸಲಾಗಿದೆ. ಮೋದಿ ರಂಗೋಲಿಯನ್ನು ನೋಡಲು ಮೋದಿ ಅಭಿಮಾನಿಗಳು ಆಗಮಿಸಿ, ಪೋಟೋ ಸೆಲ್ಪಿ ಕ್ಲಿಕಿಸಿ ಸಂತಸ ವ್ಯಕ್ತಪಡಿಸಿದ್ದಾರೆ.