
UDUPI : ಕಾಲೇಜ್‌ಗೆ ಹೋದ ವಿದ್ಯಾರ್ಥಿನಿ, ಮರಳಿ ಮನೆಗೆ ಬಾರದೇ ಪ್ರಿಯಕರನೊಂದಿಗೆ ಮದುವೆ..!
Saturday, September 17, 2022
ಉಡುಪಿಯ ಕಟಪಾಡಿ ಮಟ್ಟು ಅಳಿಂಜೆ ನಿವಾಸಿ ನವ್ಯಾ (20) ಉಡುಪಿಯ ಕಾಲೇಜೊಂದರಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದು, ಮನೆಯಿಂದ ಕಾಲೇಜ್‌ಗೆ ಅಂತ ಹೋದವಳು ನಾಪತ್ತೆ ಆಗಿದ್ದಳು ನಾಪತ್ತೆಯಾಗಿರುವ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆದ್ರೆ ನಾಪತ್ತೆಯಾದ ಪ್ರಕರಣಕ್ಕೆ ಈಗ ಮತ್ತೊಂದು ಮದುವೆ ತಿರುವು ಸಿಕ್ಕಿದೆ. ಪಣಿಯೂರು ನಿವಾಸಿ ದೀಕ್ಷಿತ್ ಎಂಬಾತ ತಾನು ಕಟಪಾಡಿ ಮಟ್ಟು ಗ್ರಾಮದ ನವ್ಯಾ ವಿ. ಎಂಬಾಕೆ ಯೊಂದಿಗೆ ಹಿಂದೂ ಧರ್ಮದ ಪ್ರಕಾರದಲ್ಲಿ ಸೆ. 7ರಂದು ವಿವಾಹ ವಾಗಿದ್ದು, ಸೆ. 15ರಂದು ಉಡುಪಿ ರಿಜಿಸ್ಟರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಕೊಂಡಿದ್ದೇವೆ. ಈ ಬಗ್ಗೆ ಯಾರಾದರೂ ದೂರು ನೀಡಿದರೆ ಪೊಲೀಸ್ ತನಿಖೆ ನಡೆಸದಂತೆ ಮದುವೆಯ ಫೋಟೋ ಸಹಿತವಾಗಿ ಕಟಪಾಡಿ ಹೊರ ಠಾಣೆಯ ಮೂಲಕ ವಾಗಿ ಕಾಪು ಪೊಲೀಸ್ ಠಾಣೆಗೆ ನೀಡಿ ರುವ ಮನವಿಯಲ್ಲಿ ತಿಳಿಸಿದ್ದಾರೆ.